Cinisuddi Fresh Cini News 

ಕೊರೋನಾ ಬಗ್ಗೆ ಎಚ್ಚರವಿರಲಿ ಎಂದ “ಸಾ ರಾ ವಜ್ರ” ಚಿತ್ರ ತಂಡ

ದೇಶವ್ಯಾಪಿ ಹರಡಿರುವ ಕೊರೋನಾ ಭೀತಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚಿತ್ರೋದ್ಯಮ ಕೂಡ ಇದರಿಂದ ನಲುಗಿ ಹೋಗಿದೆ. ಇದರ ನಡುವೆಯೂ ಆಶಾಭಾವನೆಯೊಂದಿಗೆ ಎಲ್ಲರು ಜಾಗೃತರಾಗಿರಿ ಕೊರೋನಾ ಬಗ್ಗೆ ಎಚ್ಚರವಿರಲಿ ಎಂದು ಹೇಳುತ್ತಿರುವ ತಂಡ ಸಾ ರಾ ವಜ್ರ ಈ ಚಿತ್ರ ತಂಡ.

1098 save childhood ಚಿತ್ರವನ್ನು‌ ನಿರ್ದೇಶಿಸಿದ್ದ ಆರ್ನಾ ಸಾಧ್ಯ ‌ ಸಾರಾ ವಜ್ರ ಚಿತ್ರ ನಿರ್ದೇಶಿಸಿದ್ದು , ಈ ಚಿತ್ರ ಸಾರಾ ಅಬೂಬಕ್ಕರ್ ರವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಅನು ಪ್ರಬಾಕರ್ , ರಮೇಶ್ ಭಟ್ , ಸುಧಾ ಬೆಳವಾಡಿ , ಸುಹಾನ , ಪ್ರದೀಪ್ ಪೂಜಾರಿ , ವಿಭಾಸ್ , ಅಂಕಿತ , ಸಾಯಿ ತೋಶಿತ್ , ಆಯುಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಸಾರಾ ವಜ್ರ
ಚಿತ್ರದ ಡಬ್ಬಿಂಗ್ ಮುಗಿದಿದೆ.

ಚಿತ್ರದಲ್ಲಿ ಏಳು ಹಾಡುಗಳಿಗೆ ವಿ. ಮನೋಹರ್ ಸಂಗೀತ ಹಾಗೂ ಹಿನ್ನೆಲೆ ಸಂಗೀತವಿದೆ. ಹನೀಫ್ ಹಾಗೂ ವಿ.ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿದೆ. ಕೊರೋನಾ ಸಾಂಕ್ರಾಮಿಕ ಭೀತಿ ದೂರವಾಗುತ್ತಿದ್ದಂತೆ ಉಳಿದ ಕೆಲಸಗಳಲ್ಲಿ ತೊಡಗುತ್ತೇವೆ.

ನರೇಂದ್ರಬಾಬು ರವರ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸಂಭ್ರಮ ಡ್ರೀಂ ಹೌಸ್ ನ ಮೂಲಕ ದೇವೇಂದ್ರ ರೆಡ್ಡಿ ಅವರು ನಿರ್ಮಿಸುತ್ತಿದ್ದಾರೆ. ಪರಮೇಶ್ ಸಿ .ಎಂ. ಛಾಯಾಗ್ರಹಣ ವಿ. ಮನೋಹರ್ ಸಂಗೀತ ನಿರ್ದೇಶನ ಹಾಗೂ ಅಕ್ಷಯ್ ಪಿ ರಾವ್ ಅವರ ಸಂಕಲನ ಸಾರಾ ವಜ್ರ ಚಿತ್ರಕ್ಕಿದೆ. ಸರ್ಕಾರ ಸೂಚಿಸಿದಂತೆ ನಡೆದುಕೊಂಡು ಕೊರೋನಾ ಹರಡದಂತೆ ತಡೆಗಟ್ಟೊಣ

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರಿ ಮೊಬೈಲ್ ನಿಂದ ದೂರ ಇರಿ ಎಂದು ಚಿತ್ರದ ನಿರ್ದೇಶಕಿ ಆರ್ನಾ ಸಾಧ್ಯ ಮನವಿ ಮಾಡಿದರು.

Share This With Your Friends

Related posts