Cinisuddi Fresh Cini News 

ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ರೆಡಿಯಾದ ‘ಸೈಕೋ’ ಡೈರೆಕ್ಟರ್

ನಿನ್ನ ಪೂಜೆಗೆ ಬಂದೆ ಮಹದೇಶ್ವರಾ… ಈ ಹಾಡು ಯಾರಿಗೆ ಗೊತ್ತಿಲ್ಲ ನೀವೇ ಹೇಳಿ. ಹೌದು… ಹೆಸರಾಂತ ಗಾಯಕ ರಘು ದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದ ಈ ಹಾಡಿನ ಚಿತ್ರವೇ ಸೈಕೋ. ಈ ಸೈಕೋ ‌ಚಿತ್ರವನ್ನು‌ ನಿರ್ದೇಶಿಸಿದ್ದ ದೇವದತ್ತ ಸುಮಾರು ‌ವರ್ಷಗಳ‌ ನಂತರ ನಿರ್ದೇಶನಕ್ಕೆ ಮರಳಿದ್ದಾರೆ .

” S” ಎಂಬ ಹೆಸರಿನ‌ ಚಿತ್ರವನ್ನು ವಿ. ದೇವದತ್ತ ಅವರು ನಿರ್ದೇಶಿಸುತ್ತಿದ್ದು, ಏಪ್ರಿಲ್ 10ರ ನಂತರ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗು ದೊಡ್ಡಬಳ್ಳಾಪುರ ದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಹಾಡಗಳ ಚಿತ್ರೀಕರಣ ನಡೆಯಲಿದೆ.

ದೇವದತ್ತ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶ್ರೀ ಮಹಾಬಲ ಕ್ರಿಯೇಷನ್ಸ್ ಮೂಲಕ ನಾಗರಾಜು ಕೆ.ವಿ. ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಒಂದು ಶಿಕಾರಿಯ ಕಥೆ ಚಿತ್ರದಲ್ಲಿ ನಟಿಸಿದ್ದ ಅಭಿಮನ್ಯು
ಪ್ರಜ್ವಲ್ ಈ ಯೂತ್ ಫುಲ್ ಲವ್ ಸ್ಟೋರಿಯ ನಾಯಕನಾಗಿ ನಟಿಸುತ್ತಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಭಾಕುಮಾರ್ ಛಾಯಾಗ್ರಹಣ, ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಬಿ.ಎಸ್.ಕೆಂಪರಾಜ್ ಅವರ ಸಂಕಲನ “S” ಚಿತ್ರಕ್ಕಿದೆ.

Share This With Your Friends

Related posts