Cinisuddi Fresh Cini News 

ತೆರೆಗೆ ಬರಲು ಸಿದ್ಧವಾಗಿದೆ ಆಕ್ಷನ್,ಥ್ರಿಲ್ಲರ್ ‘ರನ್ 2’ ಚಿತ್ರ

ಆಕ್ಷನ್,ಥ್ರಿಲ್ಲರ್ ‘ರನ್-2’ ಚಿತ್ರಕ್ಕೆ ಬಿ.ಎಸ್.ಸಂಜಯ್ ಕತೆ,ಚಿತ್ರಕತೆ,ಸಂಕಲನ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಡಿಬರಹದಲ್ಲಿ ಬಾರ್ನ್ ಟಫ್ ಎಂದು ಹೇಳಿಕೊಂಡಿದ್ದಾರೆ.

ಸಿನಿಮಾ ಕುರಿತು ಹೇಳುವುದಾದರೆ ಕಾಲೇಜು ದಿನಗಳನ್ನು ನೆನಪಿಸಿಕೊಂಡು ಹಾಗಯೇ ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸಹಾಯ ಕೋರುತ್ತಾಳೆ. ಅವಳ ಇಚ್ಚೆಯಂತೆ ಕರೆದುಕೊಂಡು ಹೋಗುವಾಗ ಸಮಸ್ಯೆಗಳು ಬರುತ್ತವೆ.

ಅವೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕುಮುಟ, ಹೊನ್ನಾವರ, ಯಾಣದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಎಂ.ಸಂಜೀವರಾವ್ ಸಂಗೀತ ಸಂಯೋಜಿಸಿದ್ದಾರೆ.

2015ರ ಮಿಸ್ಟರ್ ವಲ್ರ್ಡ್ ಮತ್ತು ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಮಂಗಳೂರಿನ ಪವನ್‍ಶೆಟ್ಟಿ ನಾಯಕನಾಗಿ ಎರಡನೆ ಅನುಭವ. ಪಂಟ ಚಿತ್ರದಲ್ಲಿ ಕುಲುಕು ಕುಲುಕು ಹಾಡಿಗೆ ಹೆಜ್ಜೆ ಹಾಕಿದ್ದ ಬಾಂಬೆಯ ತಾರಾಶುಕ್ಲ ನಾಯಕಿ.

ಇವರೊಂದಿಗೆ ಕುರಿರಂಗ, ಜನಾರ್ಧನ್ ಮತ್ತು ಖಳನಾಗಿ ಮಹೇಶ್‍ಕುಮಾರ್‍ಕುಮುಟ ಮೊದಲಬಾರಿ ಬಣ್ಣ ಹಚ್ಚಿದ್ದಾರೆ. ಛಾಯಾಗ್ರಹಣ ರಮೇಶ್‍ಕೋಯಿರಾ, ನೃತ್ಯ ಅಕುಲ್, ಸಾಹಸ ಕೌರವ್‍ವೆಂಕಟೇಶ್ ಅವರದಾಗಿದೆ. ಎಸ್.ಪಿ.ಆರ್ ಪ್ರೊಡಕ್ಷನ್ ಮೂಲಕ ಎಂ.ಸುಜಾತ ನಿರ್ಮಾಣ ಮಾಡಿರುವ ಚಿತ್ರವು ಇದೇ ಡಿಸೆಂಬರ್ 4ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

Related posts