Cinisuddi Fresh Cini News Tollywood 

ಬಹು ನಿರೀಕ್ಷಿತ “RRR” ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್

ಬಹುನಿರೀಕ್ಷಿತ RRR , ರೌದ್ರ ರಣ ರುಧಿರ, ಚಿತ್ರವೂ ದಸರಾ ಹಬ್ಬದಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಕನ್ನಡಕ್ಕೆ ಕೆ.ಆರ್.ಜಿ ಸ್ಟುಡಿಯೊಸ್ ತರುತ್ತಿದೆ. ಪಂಚಭಾಷೆಗಳಲ್ಲಿ ಏಕಕಾಲಕ್ಕೆ ಅಕ್ಟೋಬರ್ ೧೩ರಂದು ತೆರೆಕಾಣಲಿದೆ. ಜೂ. ಎನ್.ಟಿ.ಆರ್ , ರಾಮ್ ಚರಣ್, ಅಜಯ್ ದೇವ್ಗನ್, ಅಳಿಯ ಭಟ್, ಸಮುಥಿರಕಿಣಿ ಮುಂತಾದವರ ದೊಡ್ಡ ತಾರಾಬಳಗ ಈ ಚಿತ್ರಕ್ಕಿದೆ. ಪಿರಿಯಡ್ ಆಕ್ಷನ್ ಡ್ರಾಮಾ ಇದಾಗಿದ್ದು, ಇಬ್ಬರು ಸ್ವತಂತ್ರ ಹೋರಾಟಗಾರರ ಕುರಿತ ಕಥೆಯಾಗಿದೆ. ಡಿ.ವಿ.ವಿ. ದಾನಯ್ಯ ಈ ಚಿತ್ರದ ನಿರ್ಮಾಪಕರು.

Related posts