Cinisuddi Fresh Cini News 

ಖಡಕ್ ಪೋಲೀಸ್ ಅಧಿಕಾರಿಯಾಗಿ ನೆನಪಿರಲಿ ಪ್ರೇಮ್

‘ರೌಡಿ ಫೆಲೋ’ ಚಿತ್ರದಲ್ಲಿ ಹಲವು ವಿಶೇಷತೆಗಳು ಇರುವುದರ ಬಗ್ಗೆ ಸುದ್ದಿಯಾಗಿತ್ತು. ಈಗ ಹೊಸದೊಂದು ವಿಷಯದೊಂದಿಗೆ ಸದ್ದು ಮಾಡುತ್ತಿದೆ. ನಟ ಆರ್.ಜೆ.ರೋಹಿತ್ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ಸಿನಿಮಾಕ್ಕೆ ನೆನಪಿರಲಿ ಪ್ರೇಮ್ ಖಡಕ್ ಪೋಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ.

ಈ ಕುರಿತು ಪ್ರೇಮ್‍ರವರಲ್ಲಿ ಕೇಳಿದಾಗ ರೋಹಿತ್ ನನಗೆ ಒಳ್ಳೆ ಸ್ನೇಹಿತ. ಹೊಸದಾಗಿ ಆಕ್ಷನ್‍ಕಟ್ ಹೇಳುತ್ತಿದ್ದಾನೆ. ಪಾತ್ರವನ್ನು ನೀವು ಮಾಡಿದರೆ ಚೆನ್ನಾಗಿರುತ್ತದೆ. ನಿಮಗೆ ಸೂಟ್ ಅಗುತ್ತದೆ ಎಂದು ಕೇಳಿಕೊಂಡಿದ್ದರು.

ಹಾಗಾಗಿ ಮಾಡಲಾಯಿತು. ಗಬ್ಬರ್‍ಸಿಂಗ್, ದಬಾಂಗ್ ಸಿನಿಮಾದ ರೀತಿಯಲ್ಲಿ ಇರಲಿದೆ. ಅತಿಥಿ ಪಾತ್ರ ಎನ್ನಬಹುದು. ಶೂಟಿಂಗ್‍ದಲ್ಲಿ ಎಂಜಾಯ್ ಮಾಡಿಕೊಂಡು ಮುಗಿದಿದ್ದೇ ಗೊತ್ತಾಗಲಿಲ್ಲ ಎನ್ನುತ್ತಾರೆ.

ಕತೆ ಬರೆಯುವ ಸಮಯದಲ್ಲೆ ಇಂತಹ ರೋಲ್‍ನ್ನು ವಿಶೇಷ ವ್ಯಕ್ತಿಯಿಂದ ಮಾಡಿಸಬೇಕೆಂದು ಆಲೋಚಿಸಿದ್ದರಂತೆ. ಪ್ರೇಮ್‍ರನ್ನು ಕೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ತೆರೆ ಮೇಲೆ ಇಪ್ಪತ್ತು ನಿಮಿಷ ಅವರ ಸನ್ನಿವೇಶಗಳು ಬರಲಿದೆ.

ಸ್ಯಾಂಡಲ್‍ವುಡ್, ಬಾಲಿವುಡ್, ಕಾಲಿವುಡ್‍ದಲ್ಲಿ ಹೆಸರು ಮಾಡಿರುವ ಕನ್ನಡದ ಸಾಹಸ ನಿರ್ದೇಶಕ ರವಿವರ್ಮ ಕೂಡ ಇದರಲ್ಲಿ ಮೂಗನಾಗಿ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾರಗಣದಲ್ಲಿ ಪ್ರಕಾಶ್‍ರೈ, ಊರ್ವಶಿ ಮುಂತಾದವರ ಅಭಿನಯದವಿದೆ. ಕತೆಗೆ ಕೆಜಿಎಫ್‍ನ ಪ್ರಶಾಂತ್‍ನೀಲ್ ಟಚ್ ಕೊಟ್ಟಿದ್ದಾರೆ.

Share This With Your Friends

Related posts