Cinisuddi Fresh Cini News 

ರೆಡ್ಡಿ ಕೃಷ್ಣರ “ರೌಡಿ ಬೇಬಿ” ಚಿತ್ರಕ್ಕೆ ರಿಶಭ್ ಶೆಟ್ಟಿ ಕ್ಲ್ಯಾಪ್

ಯುವ ತಂಡವೇ ಕೂಡಿಕೊಂಡು ನಿರ್ಮಿಸುತ್ತಿರುವ ಚಿತ್ರ “ರೌಡಿ ಬೇಬಿ “ಚಿತ್ರದ ಮುಹೂರ್ತಕ್ಕೆ ಸೆನ್ಸೇಷನಲ್ ನಟ ನಿರ್ದೇಶಕ ರಿಶಭ್ ಶೆಟ್ಟಿ ಕ್ಲ್ಯಾಪ್ ಮಾಡಿದ್ದಾರೆ. ಮಹೂರ್ತಕ್ಕೆ , ರಂಗಿತರಂಗ ನಿರ್ಮಾಪಕ ಪ್ರಕಾಶ್ ಹಾಗೂ ನಿರ್ದೇಶಕ ನವರಸನ್ ಅತಿಥಿಗಳಾಗಿ ಆಗಮಿಸಿದ್ದರು, ರೆಡ್ಡಿ ಕೃಷ್ಣ ನಿರ್ದೇಶನದ ರೌಡಿ ಬೇಬಿ ಚಿತ್ರದ 50% ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು , ಚಿತ್ರತಂಡ ಮಂಗಳೂರಿಗೆ ಮುಂದಿನ ಹಂತದ ಶೂಟಿಂಗ್ ಗೆ ತೆರಳಿದೆ. ರೆಡ್ಡಿ ಕೃಷ್ಣ ನಿರ್ದೇಶನದ , ರೌಡಿ ಬೇಬಿ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ರವರು ಪೂರ್ಣ ಪ್ರಮಾಣದ ಸಾಹಿತ್ಯ ಬರಹಗಾರರಾಗಿ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.

Share This With Your Friends

Related posts