Cini Reviews Cinisuddi Fresh Cini News 

ಮರ್ಡರ್ ಮಿಸ್ಟರಿಯ ರೋಚಕತೆ “ಕಾಕ್ಟೇಲ್” (ಚಿತ್ರವಿಮರ್ಶೆ-ರೇಟಿಂಗ್ : 3/5 )

ರೇಟಿಂಗ್ : 3/5

ಚಿತ್ರ : ಕಾಕ್ಟೇಲ್
ನಿರ್ದೇಶಕ : ಶ್ರೀರಾಮ್ ಬಾಬು
ನಿರ್ಮಾಪಕ : ಡಾ. ಶಿವಪ್ಪ
ಸಂಗೀತ : ಲೋಕಿ ತವಸ್ಯ
ಛಾಯಾಗ್ರಹಕ : ರವಿವರ್ಮ
ತಾರಾಗಣ : ವೀರೇನ್ ಕೇಶವ್, ಚರಿಸ್ಮ ಚಂಡಮ್ಮ, ಶೋಭ ರಾಜ್, ಶಿವಮಣಿ, ರಮೇಶ್ ಪಂಡಿತ್, ಮಹಾಂತೇಶ್ ಚಂದ್ರಕಲಾ ಹಾಗೂ ಮುಂತಾದವರು…

ಇತ್ತೀಚೆಗೆ ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮೇಸ್ಟ್ರಿಯ ಚಿತ್ರಗಳು ಕುತೂಹಲಕಾರಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಆ ನಿಟ್ಟಿನಲ್ಲಿ ಕೊಲೆಗಳ ಸುತ್ತಾ ಹೇಳಿದಿರುವ ವಿಭಿನ್ನ ಕಥಾಹಂದರವಿರುವ ಚಿತ್ರ ಕಾಕ್‍ಟೈಲ್. ಮೂವರು ಹೆಣ್ಣುಮಕ್ಕಳ ಕೊಲೆ ಪ್ರಕರಣದ ತನಿಖೆಯ ಹಾದಿಯಲ್ಲಿ ಜರುಗುವ ಘಟನೆಗಳನ್ನು ರೋಮಾಂಚಕರಿಯದ್ದು, ಈ ಕಥೆಯಲ್ಲಿ ಒಬ್ಬ ಮಂತ್ರವಾದಿ, ಒಬ್ಬ ವೇಶ್ಯೆಯ ಹಾಗೂ ರಾಜಕಾರಣಯ ಕಥೆಗಳು ಹೀಗೆ ಎಲ್ಲವೂ ಪಾತ್ರಗಳಾಗಿ ಬರುತ್ತವೆ, ಒಬ್ಬ ಚಿತ್ರ ನಿರ್ದೇಶಕನೂ ಇಲ್ಲಿ ಪಾತ್ರವಾಗಿ ಬರುತ್ತಾನೆ.

ಹೀಗೆ ಆರಂಭದಿಂದಲೂ ಗೊಂದಲದ ಗೂಡಾಗಿ ಸಾಗುವ ಕಥೆಯಲ್ಲಿ ತಾತ್ವಿಕ ತಿರುವು ಕೊಡುತ್ತಾ ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕರ ತಲೆಯಲ್ಲಿ ಹುಳ ಬಿಟ್ಟು ಮುಂದಿನ ಭಾಗಕ್ಕೆ ದಾರಿ ಮಾಡಿಕೊಂಡಿದೆ. ನಿರ್ದೇಶಕ ಶ್ರೀರಾಮ್ ಸೆಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥಾನಕದ ಮೂಲಕ ಆರಂಭದಿಂದ ಕೊನೆಯ ವರೆಗೂ ವೀಕ್ಷಕರಲ್ಲಿ ಕುತೂಹಲವನ್ನು ಮೂಡಿಸಿ ಮನರಂಜನೆಯ ಜೊತೆಗೆ ಕಾಮಿಡಿ ಹೀಗೆ ಎಲ್ಲಾ ನವರಸಗಳ ಮಿಶ್ರಣ ಬೆಸೆದಿದ್ದು, ಒಂದೇ ಹೆಸರಿನ ಮತ್ತು ಒಂದೇ ವಯಸಿನ ಮೂವರು ಹುಡುಗಿಯರ ಸರಣಿ ಕೊಲೆ ನಡೆದಾಗ, ಅದರ ಸುತ್ತ ನಡೆಯುವ ತನಿಖೆಯ ಹಾದಿಯನ್ನು ಬಹಳ ಏರಿಳಿತದೊಂದಿಗೆ ನಿರ್ದೇಶಕರು ತೆರೆಯ ಮೇಲೆ ತೋರಿಸಿದ್ದಾರೆ.

ಚಿತ್ರದ ಓಟ ಮತ್ತಷ್ಟು ವೇಗ ಮಾಡಬಹುದಿತ್ತು. ಒಂದು ವಿಭಿನ್ನ ಕಥೆಯನ್ನ ಆಯ್ಕೆ ಮಾಡಿಕೊಂಡು ತಮ್ಮ ಪುತ್ರನ ಬೆಳ್ಳಿ ಪರದೆ ಮೇಲೆ ಪರಿಚಯಿಸಿರುವ ನಿರ್ಮಾಪಕ ಡಾ. ಶಿವಪ್ಪ ರವರ ಧೈರ್ಯವನ್ನು ಮೆಚ್ಚಲೇಬೇಕು.
ಇನ್ನು ಈ ಚಿತ್ರದ ಮೂಲಕ ಯುವ ನಟ ವೀರೇನ್ ಕೇಶವ್ ಬಹಳಷ್ಟು ಪೂರ್ವ ತಯಾರಿಯನ್ನ ಮಾಡಿಕೊಂಡು ಬೆಳ್ಳಿ ಪರದೆ ಮೇಲೆ ಬಂದಂತೆ ಕಾಣುತ್ತಿದೆ.

ಸಹಜಾಭಿನಯ ನೀಡುವ ಮೂಲಕ ತನ್ನ ನಟನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಮುಂದೆ ಉತ್ತಮ ನಟನಾಗಿ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.ಹಾಗೆಯೇ ನಾಯಕಿ ಚರಿಷ್ಮಾ ಕೂಡ ತನಗೆ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಉಳಿದಂತೆ ಅಭಿನಯಿಸಿರುವ ಶೋಭ್ ರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್ ಪಂಡಿತ್ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇನ್ನು ಈ ಚಿತ್ರಕ್ಕೆ ಲೋಕಿ ತವಸ್ಯ ಸಂಗೀತ ಗಮನಾರ್ಹವಾಗಿದೆ. ಹಾಗೆಯೇ ರವಿವರ್ಮ ಗಂಗು ಕ್ಯಾಮರಾ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ಚಿತ್ರ ವಿಭಿನ್ನವಾಗಿ ಮೂಡಿ ಬಂದಿದ್ದು, ಸಸ್ಪೆನ್ಸ್ ಸಿನಿ ಪ್ರಿಯರಿಗೆ ಚಿತ್ರ ಬಹಳ ಇಷ್ಟವಾಗುತ್ತಿದೆ. ಎಲ್ಲರೂ ಒಮ್ಮೆ ನೋಡುವಂತ ಚಿತ್ರವಾಗಿ ಕಾಕ್ಟೇಲ್ ಹೊರ ಬಂದಿದೆ

Related posts