“ರಾಬರ್ಟ್” ಚಿತ್ರದ ರಿಲೀಸ್ ಡೇಟ್ ಫಿಕ್ಸ್
ಸ್ಯಾಂಡಲ್ ವುಡ್ ನ ಡಿ ಬಾಸ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ಕೊನೆಗೂ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 11 ಶಿವರಾತ್ರಿ ಹಬ್ಬದಂದು “ರಾಬರ್ಟ್” ಬೆಳ್ಳಿ ಪರದೆ ಮೇಲೆ ಅಬ್ಬರಿಸಲಿದ್ದಾನೆ. ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿಗೌಡ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಾಯಕನ ಹೆಸರು ಕ್ರಿಶ್ಚಿಯನ್ ಧರ್ಮದ್ದಾದರೆ , ಚಿತ್ರದ ಪೋಸ್ಟರ್ನಲ್ಲಿ ಹಿಂದೂಗಳ ಆರಾಧ್ಯ ದೈವ ರಾಮನ ಭಂಟ ಹನುಮನಿದ್ದಾನೆ. ಹನುಮಂತನ ಅವತಾರವೆತ್ತಿರುವ ದಾಸ ರಾಮನನ್ನು ತನ್ನ ಹೆಗಲ ಮೇಲಿರಿಸಿಕೊಂಡು ನಿಂತಿರುವ ಪೋಸ್ಟರ್ ಹಾಗೂ ತಲೆಗೆ ಬಟ್ಟೆ ಕಟ್ಟಿಕೊಂಡು ಜೀನ್ಸ್ ಜಾಕೆಟ್ ನಲ್ಲಿ ಓಡುತ್ತಿರುವ ಪೋಸ್ಟರ್ ಗಳು ಅಭಿಮಾನಿಗಳ ಗಮನ ಸಳೆದಿದೆ.
ಈ ಚಿತ್ರದಲ್ಲಿ ರಾಬರ್ಟ್ ದರ್ಶನ್ ಗೆ ಜೋಡಿಯಾಗಿ ಆಶಾಭಟ್ ಜೊತೆಯಾಗಿದ್ದಾರೆ. ಉಳಿದಂತೆ ತೇಜಸ್ವಿನಿ, ಸೋನಾಲ್ ಮಾಂತೆರೋ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಖ್ಯಾತನಟ ಜಗಪತಿ ಬಾಬು ಸೇರಿದಂತೆ ಅನೇಕರ ದೊಡ್ಡ ತಾರಾಬಳಗವೇ ಇದೆ. ಹೀಗಾಗಿ ಚಿತ್ರದ ಮೇಲೆ ಸಿನಿಪ್ರಿಯರಿಗೆ ಹೆಚ್ಚಿನ ನಿರೀಕ್ಷೆಯಿದೆ.
ಸದ್ಯ ಫೇಸ್ ಬುಕ್ ಮೂಲಕ ನಟ ದರ್ಶನ್ ಚಿತ್ರದ ಕುರಿತು ಹಾಗೂ ತಮ್ಮ ಹುಟ್ಟುಹಬ್ಬದ ಕುರಿತು ಮಾತನಾಡಿ ಈ ಬಾರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮನೆಯ ಬಳಿ ಬರುವುದು ಬೇಡ ಎಂದಿದ್ದಾರೆ. ಹಾಗೂ ಹಳ್ಳಿ ಹಳ್ಳಿಗೆ ತೆರಳಿ ರಾಬರ್ಟ್ ಚಿತ್ರದ ಪ್ರಚಾರವನ್ನು ಮಾಡುತ್ತೇನೆ ಮಾರ್ಚ್ 11 ರಂದು ರಾಬರ್ಟ್ ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.