Cinisuddi Fresh Cini News 

ಸಂಚಲನ ಸೃಷ್ಟಿಸಿದ “ರಾಬರ್ಟ್‌” ಪೋಸ್ಟರ್

ಸ್ಯಾಂಡಲ್ ವುಡ್ ನ ಡಿ ಬಾಸ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ “ರಾಬರ್ಟ್” ಬಹುಕೋಟಿ ವೆಚ್ಚದಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹೊಸ ಪೋಸ್ಟರನ್ನು ನಿರ್ಮಾಪಕರ ಹುಟ್ಟುಹಬ್ಬದ ಕೊಡುಗೆಯಾಗಿ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹೊಸ ಪೋಸ್ಟರ್‍ನಲ್ಲಿ ನಟ ದರ್ಶನ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಬರ್ಟ್ ಸಿನಿಮಾದ ನಿರ್ಮಾಪಕರಾದ ಉಮಾಪತಿ ಗೌಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಬರ್ಟ್ ಚಿತ್ರದ ಈ ಹೊಸ ಪೋಸ್ಟರನ್ನು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು , ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಈ ಹೊಸ ಪೋಸ್ಟರಿನ ವಿಶೇಷತೆ ಏನೆಂದರೆ ಕೈಯಲ್ಲಿ ಸಿಗಾರ್ ಹಿಡಿದಿರುವ ದರ್ಶನ್ ಚಿನ್ನದ ಬಣ್ಣದ ಹೊಳಪಿನಲ್ಲಿ ಮಿಂಚುತ್ತಿದ್ದಾರೆ. ದರ್ಶನ್ ‍ರ ಈ ಹೊಸ ಲುಕ್ ಮಾಸ್‍ಗೆ ಬದಲಾಗಿ ಹೆಚ್ಚು ಸ್ಟೈಲಿಶ್ ಆಗಿದೆ. ದರ್ಶನ್ ಸಹ ಈ ಪೋಸ್ಟರಿನಲ್ಲಿ ಸಖತ್ತಾಗಿ ಕಾಣಿಸುತ್ತಿದ್ದಾರೆ.

ಈ ವಿಶೇಷ ಪೋಸ್ಟರ್‍ನಲ್ಲಿ ರಾಬರ್ಟ್ ದರ್ಶನ್ ಅವರು ರಾಕ್‍ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ಮುಂದೆ ಒಂದು ಮೈಕು ಇದ್ದು, ಹಿಂದೆ ಒಂದು ಸ್ಟಾರ್ ಕೂಡ ಇದೆ. ಪಕ್ಕದಲ್ಲಿ ಸೈಕಲ್ ಚೈನ್ ಬೇರಿಂಗ್‍ಗಳಿಂದ ಮಾಡಿದ ಗಿಟಾರ್ ಸಹ ಇದೆ.

ಇದೆಲ್ಲ ಸೆಟಪ್‍ಗಳು ದರ್ಶನ್ ಅವರಿಗೆ ರಾಕ್‍ಸ್ಟಾರ್ ಲುಕ್ ನೀಡಿದೆ. ಹಲವಾರು ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗೆ ರಾಬರ್ಟ್‍ನ ಹೊಸ ಪೋಸ್ಟರನ್ನು ಡಿಪಿ ಮಾಡಿಕೊಂಡಿದ್ದಾರೆ. ಡಿ ಬಾಸ್ ಪೋಸ್ಟರ್ ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಸಹ ಮಾಡಿದ್ದಾರೆ.

ಅದಲ್ಲದೇ ಕೆಲವು ಅಭಿಮಾನಿಗಳು ರಾಬರ್ಟ್ ಚಿತ್ರದ ಮಾಸ್ಕ್ ಕೂಡ ಧರಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಈ ಹಿಂದಿನ ಪ್ಲಾನ್‍ನಂತೆ ಆಗಿದ್ದರೆ ರಾಬರ್ಟ್ ಚಿತ್ರ ಕಳೆದ ಏಪ್ರಿಲ್ ತಿಂಗಳಲ್ಲೇ ಬಿಡುಗಡೆಯಾಗಿರಬೇಕಿತ್ತು.

ಆದರೆ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಚಿತ್ರಮಂದಿರಗಳು ಓಪನ್ ಆಗುವ ವರೆಗೂ ಕಾಯಲೇಬೇಕು.

ರಾಬರ್ಟ್ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಉಮಾಪತಿ ಗೌಡ ಅವರನ್ನು ಒಟಿಟಿಯ ವ್ಯವಸ್ಥಾಪಕ ಮಂಡಳಿ ಸಂಪರ್ಕ ಮಾಡಿತ್ತು. ಆದರೆ ಚಿತ್ರದ ನಿರ್ಮಾಪಕರಾದ ಉಮಾಪತಿ ಗೌಡ ಅವರು ನಾನು ರಾಜ್ಯದ ಕೋಟ್ಯಾಂತರ ದರ್ಶನ್ ಅಭಿಮಾನಿಗಳಿಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು , ಎಷ್ಟೇ ತಡವಾದರೂ ಕೂಡ ನಾವು ರಾಬರ್ಟ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳುವ ಮೂಲಕ ಕೋಟ್ಯಂತರ ರೂಪಾಯಿಗಳ ಡೀಲನ್ನು ಕೈಬಿಟ್ಟಿದ್ದರು.

ಇದು ನಿಜಕ್ಕೂ ಮೆಚ್ಚುವಂತದ್ದು , ಒಬ್ಬ ನಿರ್ಮಾಪಕ ಅನ್ನದಾತ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಅರಿತು ಒಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಖಂಡಿತಾ ರಾಬರ್ಟ್ ಕರ್ನಾಟಕ ಅಲ್ಲದೇ ದೇಶ , ವಿದೇಶಗಳಲ್ಲೂ ಕೂಡ ತನ್ನ ಆರ್ಭಟವನ್ನ ಪ್ರದರ್ಶಿಸಲಿ.

ಆದಷ್ಟು ಬೇಗ ಕೊರೋನಾ ಹಾವಳಿ ದೂರವಾಗಿ ಪ್ರೇಕ್ಷಕರು ಬೆಳ್ಳಿ ಪರದೆಯ ಮೇಲೆ ರಾಬಟ್ ಅನ್ನು ಕಣ್ತುಂಬಿಕೊಳ್ಳಲಿ ಎಂಬುವುದೇ ನಮ್ಮ ಆಶಯ.

Share This With Your Friends

Related posts