Cinisuddi Fresh Cini News 

ಕ್ರಿಸ್‌ಮಸ್‌ಗೆ ಚಿತ್ರಮಂದಿರದಲ್ಲಿ ರಾಬರ್ಟ್ ದರ್ಶನ..!?

ಡಿಸೆಂಬರ್‍ನಲ್ಲಿ ಚಿತ್ರಗಳು ಬಿಡುಗಡೆಯಾದರೆ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ನಮ್ಮ ಸ್ಯಾಂಡಲ್‍ವುಡ್‍ನ ಬಹಳಷ್ಟು ನಾಯಕನಟರುಗಳಲ್ಲಿದೆ. ಚಾಲೆಂಜಿಂಗ್‍ಸ್ಟಾರ್ ದರ್ಶನ್ ಕೂಡ ಈ ನಂಬಿಕೆಯಿಂದ ಹೊರತಲ್ಲ. ಆದ್ದರಿಂದಲೇ ಅವರ ಚಿತ್ರಗಳು ಡಿಸೆಂಬರ್ ಆಸುಪಾಸಿನಲ್ಲೇ ಬಿಡುಗಡೆಯಾಗಿವೆ. ಕಳೆದ ವರ್ಷ ಕೂಡ ಇವರ ಅಭಿನಯದ ಒಡೆಯ ಚಿತ್ರ ಡಿಸೆಂಬರ್‍ನಲ್ಲೇ ರಿಲೀಸ್ ಆಗಿ ಗೆಲುವಿನ ನಗೆಚೆಲ್ಲಿತ್ತು. ಈ ವರ್ಷ ರಾಬರ್ಟ್ ತೆರೆಯ ಮೇಲೆ ಬರಲು ರೆಡಿಯಾಗಿದ್ದಾನೆ.

ಸ್ಯಾಂಡಲ್‍ವುಡ್ ಮತ್ತೆ ಹಳೆಯ ವೈಭವ್ಯಕ್ಕೆ ಮರಳಬೇಕಾದರೆ ಸ್ಟಾರ್ ನಟರುಗಳ ಚಿತ್ರ ಬಿಡುಗಡೆಯಿಂದಲೇ ಸಾಧ್ಯ ಎಂದು ಸಿನಿಪಂಡಿತರು ಹೇಳುತ್ತಿರುವಾಗಲೇ ಕ್ರಿಸ್ಮಸ್ ನ ಉಡುಗೊರೆಯಾಗಿ ರಾಬರ್ಟ್ ಅನ್ನು ಪ್ರೇಕ್ಷಕರ ಮಡಿಲಿಗೆ ಹಾಕಲು ಚಿತ್ರತಂಡ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‍ಗೌಡ ಸ್ಪಷ್ಟತೆ ನೀಡಿದ್ದಾರೆ. ನಮ್ಮ ರಾಬರ್ಟ್ ಚಿತ್ರವು ಬಿಡುಗಡೆಗೆ ರೆಡಿಯಾಗಿದೆಯಾದರೂ ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬೇಕೆಂಬುದನ್ನು ನಟ ದರ್ಶನ್‍ರೊಂದಿಗೆ ಚರ್ಚಿಸಿಯೇ ನಿರ್ಧರಿಸುತ್ತೇವೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‍ಗೌಡ ಹೇಳಿದ್ದಾರೆ.

ತರುಣ್‍ಸುೀರ್ ನಿರ್ದೇಶಿಸಿರುವ ರಾಬರ್ಟ್ ಚಿತ್ರದ ಮುಖ್ಯ ಕೇಂದ್ರಬಿಂದುವೇ ದರ್ಶನ್. ಈ ಚಿತ್ರದ ಕಂಟೆಂಟ್ ಕೂಡ ಡಿಫರೆಂಟಾಗಿದ್ದು ಈ ಹಿಂದೆ ದರ್ಶನ್ ಅವರು ನಟಿಸಿದ್ದ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ನಾವು ಅಂದುಕೊಂಡಂತೆಯೇ ಅದ್ಧೂರಿಯಾಗಿ ಮೂಡಿಬಂದಿದೆ.

ರಾಬರ್ಟ್ ಬಿಡುಗಡೆಯ ದಿನಾಂಕವನ್ನು ನಿರ್ಧರಿಸುವುದು ಕೂಡ ದರ್ಶನ್ ಸರ್ ಅವರೇ. ಅವರು ಮುಂದಿನ ತಿಂಗಳೇ ಬಿಡುಗಡೆ ಮಾಡಿ ಎಂದರೆ ಅದಕ್ಕೂ ಸೈ, ಅಥವಾ ಕ್ರಿಸ್‍ಮಸ್ ಉಡುಗೊರೆಯಾಗಿ ಪ್ರೇಕ್ಷಕರ ಮುಂದೆ ಬರೋಣ ಎಂದು ಹೇಳಿದರೆ ಅದಕ್ಕೂ ಒಪ್ಪಿಕೊಳ್ಳುತ್ತೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಕೊರೊನಾ ಕಾಟದಿಂದಾಗಿ ಕನ್ನಡ ಚಿತ್ರರಂಗ ಸೊರಗಿದೆ ಸ್ಟಾರ್ ಚಿತ್ರಗಳು ಬಂದರೆ ಚಿತ್ರರಂಗ ಚೇತರಿಸಿಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಿದ್ದರೆ, ಆದರೆ ನಮ್ಮ ರಾಬರ್ಟ್ ಚಿತ್ರಕ್ಕೂ ಮುನ್ನ ಅನೇಕ ಸ್ಟಾರ್ ನಟರುಗಳ ಚಿತ್ರಗಳು ಕೂಡ ಬಿಡುಗಡೆಯ ಹಂತದಲ್ಲಿದ್ದು ಅವರು ಬಿಡುಗಡೆ ಮಾಡಲು ಮುಂದೆ ಬಂದರೆ ನಾವು ಕೂಡ ಬೆಂಬಲ ನೀಡುತ್ತೇವೆಯೇ ಹೊರತು ಪೈಪೆÇೀಟಿಗೆ ನಿಲ್ಲುವುದಿಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‍ಗೌಡ ತಿಳಿಸಿದ್ದಾರೆ.

ನಟ ದರ್ಶನ್ ಅವರು ಕೂಡ ನಿರ್ಮಾಪಕರು ಹೇಳಿರುವ ಮಾತಿಗೆ ಸಮ್ಮತಿಸಿದ್ದು ಕೊರೊನಾ ಕಾಟದಿಂದಾಗಿ ಈಗ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲ. ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಚಿತ್ರವನ್ನು ಬಿಡುಗಡೆ ಮಾಡೋಣ ಎಂದು ನಿರ್ಮಾಪಕರು ಹೇಳುವ ಮಾತು ಸರಿಯಾಗಿಯೇ ಇದೆ. ನಿರ್ಮಾಪಕರೇ ಹೇಳುವಂತೆ ಇನ್ನೊಂದು ಚಿತ್ರಕ್ಕೆ ತೊಂದರೆ ಕೊಡುವುದು ನಮಗೆ ಇಷ್ಟವಿಲ್ಲ ಎಂದು ಹೇಳಿದರು.

ನಮ್ಮ ರಾಬರ್ಟ್ ಚಿತ್ರಕ್ಕೆ ಮುಖ್ಯವಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೇ ಮುಖ್ಯ. ಮಲ್ಟಿಪ್ಲೆಕ್ಸ್‍ನಲ್ಲಿ ಪ್ರೇಕ್ಷಕರು ಚಿತ್ರವನ್ನು ಧೈರ್ಯವಾಗಿ ನೋಡುವ ಹಾಗೆ ಸಿಂಗಲ್‍ಸ್ಕ್ರೀನ್‍ನಲ್ಲೂ ಧೈರ್ಯವಾಗಿ ನೋಡಲು ಚಿತ್ರಮಂದಿರಕ್ಕೆ ಬರಬೇಕು ಆಗ ನಮ್ಮ ಚಿತ್ರವನ್ನು ಬಿಡುಗಡೆ ಮಾಡಿದರೆ ಉತ್ತಮ ರೆಸ್ಪಾನ್ಸ್ ಬಂದು ನಮ್ಮ ಚಿತ್ರಕ್ಕೆ ಹಾಕಿರುವ ಬಂಡವಾಳವನ್ನು ಹಿಂಪಡೆದು ಲಾಭ ನೋಡಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಟ ದರ್ಶನ್ ಅವರು ಮೊದಲಿನಿಂದಲೂ ಒಂದು ಪಾಲಿಸಿಯನ್ನು ಪಾಲಿಸಿಕೊಂಡು ಬರುತ್ತಿದ್ದು ಒಂದು ಚಿತ್ರ ಬಿಡುಗಡೆಯಾದ ನಂತರವೇ ಮತ್ತೊಂದು ಚಿತ್ರದ ಕಡೆ ಗಮನ ಹರಿಸುವುದರಿಂದ ರಾಬರ್ಟ್ ಬಿಡುಗಡೆಯಾದ ನಂತರವೇ ದರ್ಶನ್ ಅವರ ಕಾಂಬಿನೇಷನ್‍ನಲ್ಲಿ ನಿರ್ದೇಶಕ ತರುಣ್‍ಸುೀರ್ ಅವರು ನಿರ್ದೇಶಿಸುತ್ತಿರುವ ಸಿಂಧೂರಲಕ್ಷ್ಮಣ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿರುವುದರಿಂದ ಎಲ್ಲರ ಚಿತ್ತ ರಾಬರ್ಟ್ ಚಿತ್ರದತ್ತಲೇ ನೆಟ್ಟಿದೆ.

Related posts