Cinisuddi Fresh Cini News 

ನಾನೇ ‘ಹೀರೋ’ ಅಂತಿದಾರೆ ರಿಷಬ್‍ ಶೆಟ್ಟಿ

‘ಅಜೇಯ’ ಚಿತ್ರದಲ್ಲಿ ‘ಹೀರೋ ಹೀರೋ ನಾನೆ ನಾನೇ’ ಎಂದು ನಾಯಕಿಯನ್ನು ಛೇಡಿಸುತ್ತಾ ಮುರಳಿ ಹಾಡಿದ್ದರು. ಪ್ರಸಕ್ತ ‘ಹೀರೋ’ ಸಿನಿಮಾಕ್ಕೆ ರಿಷಬ್‍ಶೆಟ್ಟಿ ನಾಯಕ ಜೊತೆಗೆ ರಿಷಬ್‍ಶೆಟ್ಟಿ ಫಿಲ್ಮ್ಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿ ಚಿಕ್ಕಮಗಳೂರು, ಹಾಸನ ಮತ್ತು ಬೇಲೂರು ಕಡೆಗಳಲ್ಲಿ 50 ದಿನಗಳ ಕಾಲ ಚಿತ್ರೀಕರಣ ಮುಗಿಸಿದ್ದಾರೆ. ಗುರುವಾರದಂದು ಚಿತ್ರದ ಮೊದಲ ಪೋಸ್ಟರ್‍ನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಾಯಕನ ಮುಖದಲ್ಲಿ ರಕ್ತದ ಕಲೆಗಳು ಕಂಡುಬರುತ್ತದೆ.

ಒಂದಿಬ್ಬರು ಓಡುತ್ತಿದ್ದಾರೆ. ಇದನ್ನು ಗಮನಿಸಿದಾಗ ಇದೊಂದು ಥ್ರಿಲ್ಲರ್,ಕ್ರೈಂ ಕತೆ ಇರಬಹುದೇನೋ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ.

ಕುತ್ತಿಗೆಯಲ್ಲಿ ಕತ್ತರಿ, ತಲೆ ಮೇಲೆ ರೇಸರ್ ಹಾಕಿಕೊಂಡು ನಗುತ್ತಿರುವುದರಿಂದ ಹಾಸ್ಯ ಚಿತ್ರವಿರಬಹುದು. ಕೇಶ ವಿನ್ಯಾಸಕಾರನೊಬ್ಬ ತನ್ನ ಜೀವನದಲ್ಲಿ ಏನೆಲ್ಲ ಕನಸುಗಳನ್ನು ಹೊತ್ತಿರುತ್ತಾನೆ. ತಾನೇ ಹಣೆದ ಕತೆಯಲ್ಲಿ ಆತನೇ ಹೇಗೆ ನಾಯಕನಾಗುತ್ತಾನೆ ಎಂಬುದು ಸಿನಿಮಾದ ಒಂದು ಏಳೆಯ ಸಾರಾಂಶವಾಗಿದೆ.

‘ಮಗಳು ಜಾನಕಿ’ ಧಾರವಾಹಿ ಖ್ಯಾತಿಯ ಗಾನವಿಲಕ್ಷಣ್ ನಾಯಕಿ. ಇವರೊಂದಿಗೆ ಮಂಜುನಾಥಗೌಡ, ಪ್ರಮೋದ್‍ಶೆಟ್ಟಿ, ಉಗ್ರಂಮಂಜು ಮುಂತಾದವರು ನಟಿಸಿದ್ದಾರೆ.

ಸರ್ಕಾರಿ ಶಾಲೆ, ಕಥಾಸಂಗಮ ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಟೆಕ್ಕಿ ಭರತ್‍ರಾಜ್ ರಚಿಸಿ ನಿರ್ದೇಶನ ಮಾಡಿದ್ದಾರೆ. ಅಜನೀಶ್‍ಲೋಕನಾಥ್ ಸಂಗೀತ, ವಿಕ್ರಂಮೋರ್ ಸಾಹಸವಿದೆ. ಸದ್ಯ ಟಾಕೀಸ್‍ದಲ್ಲಿ ಜನರಿಗೆ ತೋರಿ¸ಲು ಮೊದಲ ಆದ್ಯತೆ. ಇಲ್ಲದಿದ್ದರೆ ಓಟಿಟಿಗೆ ಅವಕಾಶ ಇರುವುದರಿಂದ ಅಲ್ಲಿಯೇ ಪ್ರಸಾರ ಮಾಡಲಾಗುವುದು ಎನ್ನುತ್ತಿದೆ.

Share This With Your Friends

Related posts