Cinisuddi Fresh Cini News 

ಜಾಗ್ವಾರ್ ನಿಖಿಲ್ ಈಗ “ರೈಡರ್”, ಫಸ್ಟ್ ಲುಕ್ ಬಿಡುಗಡೆ

ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಅಭಿನಯದ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಜಾಗ್ವಾರ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ನಾಯಕನಾಗಿ ಮಿಂಚಿದ ನಿಖಿಲ್ ಕುಮಾರಸ್ವಾಮಿ , ಸೀತಾರಾಮ ಕಲ್ಯಾಣ ಚಿತ್ರದಿಂದ ಅಭಿಮಾನಿಗಳ ಮನಸ್ಸನ್ನ ಗೆದ್ದು , ನಂತರ ಕುರುಕ್ಷೇತ್ರ ಚಿತ್ರದಲ್ಲಿ ಎಲ್ಲರ ಗಮನ ಸೆಳೆದ ನಿಖಿಲ್ ಈಗ “ರೈಡರ್” ಆಗಿ ಅಬ್ಬರಿಸಲು ಸನ್ನದ್ಧರಾಗಿದ್ದಾರೆ.

ರಾಜಕೀಯ ರಂಗ ಪ್ರವೇಶ ಮಾಡಿದಾಗ ಇನ್ನು ಚಿತ್ರರಂಗದ ಕಡೆ ಬರುತ್ತಾರಾ ಎಂಬ ಪ್ರಶ್ನೆ ಕಾಡಿತ್ತು , ಇದರ ನಡುವೆ ಮದುವೆಯಾದ ನಿಖಿಲ್ ವೈವಾಹಿಕ ಜೀವನವನ್ನು ಸುಖವಾಗಿ ನಡೆಸುತ್ತಾ , ರೈತರಾಗಿ ಕೆಲಸ ಮಾಡುತ್ತಾ , ತಮ್ಮ ಸುoದರ ಮನೆಯನ್ನು ಕಟ್ಟಲು ಮುಂದಾದರೂ , ಇದೆಲ್ಲವನ್ನೂ ಗಮನಿಸುತ್ತಿದ್ದ ಅಭಿಮಾನಿಗಳಿಗೆ ನಿಖಿಲ್ ಕುಮಾರ್ ಚಿತ್ರರಂಗಕ್ಕೆ ಬರ್ತಾರಾ ಎಂಬ ಅನುಮಾನ ಕಾಡಿತ್ತು.

ಆದರೆ ಅದೆಲ್ಲದಕ್ಕೂ ತೆರೆ ಎಳೆಯಲು ಈಗ ರೈಡರ್ ಚಿತ್ರದ ಮೂಲಕ ಅಬ್ಬರಿಸಲಿದ್ದಾರೆ. ಲಹರಿ ಫಿಲ್ಮ್ಸ್ ಅರ್ಪಿಸಿ ಚಂದ್ರು ಮನೋಹರನ್ ನಿರ್ಮಾಣದಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಂಡ ಸಾರಥ್ಯದಲ್ಲಿ ಅರ್ಜುನ್ ಜನ್ಯ ಸಂಗೀತ , ಶ್ರೀಶ ಕುದುವಳ್ಳಿ ಛಾಯಾಗ್ರಹಣ , ರವಿವರ್ಮ ಸಾಹಸ ನಿರ್ದೇಶನ ,

ಮೋಹನ್. ಬಿ. ಕೆರೆ ಕಲಾ ನಿರ್ದೇಶನ ಹಾಗೂ ಕೆ.ಎಂ. ಪ್ರಕಾಶ್ ಸಂಕಲನವಿರುವ “ರೈಡರ್” ಚಿತ್ರದ ಫಸ್ಟ್ ಲುಕ್ ಎಲ್ಲೆಡೆ ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣದ ಮಾಹಿತಿ ಚಿತ್ರತoಡ ನೀಡಬಹುದು.

Share This With Your Friends

Related posts