ನಿಖಿಲ್ ಹುಟ್ಟುಹಬ್ಬಕ್ಕೆ “ರೈಡರ್” ಟೀಸರ್ ಲಾಂಚ್
ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಹುಟ್ಟುಹಬ್ಬ ಇದೇ 22 ರಂದು ನಡೆಯಲಿದೆ. ಅಂದು ಅವರ ಅಭಿನಯದ ರೈಡರ್ ಚಿತ್ರದ ಟೀಸರ್ ಅದ್ದೂರಿಯಾಗಿ ಹೊರಬರಲಿದೆ. ಜಾಗ್ವಾರ್ ಚಿತ್ರದ ಮೂಲಕ ಅಭಿಮಾನಿಗಳ ದೊಡ್ಡ ಸಮೂಹವನ್ನೇ ಗಳಿಸಿಕೊಂಡ ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಮೂಲಕ ಎಲ್ಲರ ಮನೆಮಗನಾಗಿ ಗುರ್ತಿಸಿಕೊಂಡಿದ್ದಾರೆ.
ಈಗ ಅವರ ಬಹುನಿರೀಕ್ಷೆಯ ಚಿತ್ರ “ರೈಡರ್” ಕೂಡ ಬಹಳಷ್ಟು ಕುತೂಹಲವನ್ನು ಕೆರಳಿಸಿದ್ದು , ನಿಖಿಲ್ ಈ ಸಿನಿಮಾದಲ್ಲಿ ಯಾವ ರೀತಿ ಮಿಂಚಲಿದ್ದಾರೆ ಎಂಬ ಆತುರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಸದ್ಯ ಬಿಡುಗಡೆಯಾಗಿರುವ ಈ ಪೋಸ್ಟರ್ ನಲ್ಲಿ ಸ್ಪೋರ್ಟ್ಸ್ ಗೈ ಲುಕ್ಕಿನಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಹತ್ತು ದಿನ ಬಾಕಿ ಉಳಿದಿದ್ದು , ” ರೈಡರ್” ನ ಟೀಸರ್ ಭಾರೀ ಸಂಚಲನವನ್ನು ಮೂಡಿಸಲಿದೆ.