Cinisuddi Fresh Cini News 

ಬುಕ್ ಮೈ ಶೋ ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ ಚಿತ್ರ “ರಿವೈಂಡ್”.

ತೇಜ್ ನಿರ್ಮಿಸಿ, ನಿರ್ದೇಶನ ಮಾಡಿ ನಾಯಕನಾಗೂ ಅಭಿನಯಿಸಿದ್ದ, “ರಿವೈಂಡ್” ಚಿತ್ರ ಲಾಕ್ ಡೌನ್ ಗೂ ಕೆಲವೇ ದಿನಗಳ ಮುಂಚೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.ತಕ್ಷಣ ಲಾಕ್ ಡೌನ್ ಜಾರಿಯಾದ ಕಾರಣ ಚಿತ್ರಮಂದಿರಗಳನ್ನು‌ ಮುಚ್ಚಲಾಯಿತು. ಇದರಿಂದ ಸಾಕಷ್ಟು ತೊಂದರೆಯಾಯಿತು.  ಇದಾದ ಕೆಲವು ದಿನಗಳಲ್ಲಿ ಬುಕ್ ಮೈ ಶೋ ಅವರು ಎಟಿಟಿ ಫ್ಲಾಟ್ ಫಾರಂ ತೆರೆದು ಅದರಲ್ಲಿ ‌ಚಿತ್ರ ಬಿಡುಗಡೆ ಮಾಡುವುದಕ್ಕೆ ಅವಾಕಾಶ ಕಲ್ಪಿಸಿದರು‌.‌

ಟಿಕೇಟ್ ಗೆ ಇಷ್ಟು ಅಂತ ದರ ನಿಗದಿ ಪಡಿಸಿದರು. ನಾನು ಬುಕ ಮೈ ಶೋನಲ್ಲಿ ರಿವೈಂಡ್ ಚಿತ್ರ‌ ಬಿಡುಗಡೆ ಮಾಡಿದೆ.‌ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸುವರ್ಣ ವಾಹಿನಿಗೆ ಚಿತ್ರದ ಪ್ರಸರಣಾ ಹಕ್ಕು ಮಾರಾಟವಾಯಿತು. ಈಗ ನಮ್ಮ ಚಿತ್ರ ಬಿಡುಗಡೆ ‌ಮಾಡಲು ನೆಟ್ ಫ್ಲಿಕ್ಸ್ ನಿಂದ ಸಹ ಆಫರ್ ಬಂದಿದೆ ಎಂದು ತೇಜ ತಿಳಿಸಿದರು.

ಸೌದಿ ಹಾಗೂ ಅರಬ್ ರಾಷ್ಟಗಳಲ್ಲೂ “ರಿವೈಂಡ್” ರಿಲೀಸ್ ಆಗಲಿದೆ.. ತೇಜ್ ಅವರಿಂದ ಈ ರೀತಿಯ ಬಿಡುಗಡೆ ವಿಷಯ ತಿಳಿದ ಸಾಕಷ್ಟು ಕನ್ನಡ ‌ ನಿರ್ಮಾಪಕರು‌ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ರಿವೈಂಡ್ ಚಿತ್ರದ ಯಶಸ್ಸನ್ನು ಹಂಚಿಕೊಳಲು‌ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ “ಗಣಿ ಬಿ ಕಾಂ”, ” ಗಜನಾನ ಗ್ಯಾಂಗ್ ” ಚಿತ್ರಗಳ ನಿರ್ಮಾಪಕ ಕುಮಾರ್, “ಶಾರ್ದೂಲ” ಚಿತ್ರ ನಿರ್ಮಾಪಕ ರೋಹಿತ್, ಸಂಕಲನಕಾರ – ನಿರ್ದೇಶಕ ನಾಗೇಂದ್ರ ಅರಸ್, ನಿರ್ದೇಶಕ ಪ್ರವೀಣ್ ನಾಯಕ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ,ರಿವೈಂಡ್ ಚಿತ್ರವನ್ನು ದುಬೈನಲ್ಲಿ ಬಿಡುಗಡೆ ಮಾಡುತ್ತಿರುವ ಡಾ||ರಾಜನ್ ಅವರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯ ಹಂಚಿಕೊಂಡರು. ತೇಜ್, ಚಂದನ, ಧರ್ಮ, ಸಂದೀಪ್ ಮಲಾನಿ “ರಿವೈಂಡ್” ಚಿತ್ರದ ಕುರಿತಾಗಿ ಮಾತನಾಡಿದರು.

Related posts