Cinisuddi Fresh Cini News 

“ರೇಮೊ”‌ ಟೀಸರ್ ಲಾಂಚ್ ಮಾಡಲಿದ್ದಾರೆ ಟಾಪ್ ಡೈರೆಕ್ಟರ್ಸ್ ಮತ್ತು ಪ್ರೊಡ್ಯೂಸರ್ಸ್

ಸ್ಯಾಂಡಲ್ ವುಡ್ ನಲ್ಲಿ ಅದ್ಧೂರಿಯಾ ಚಿತ್ರಗಳ ಹವಾ ಶುರುವಾಗಿದೆ. ಆ ನಿಟ್ಟಿನಲ್ಲಿ ಟಾಪ್ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಗಳಾದ ಎ.ಹರ್ಷ, ಭರ್ಜರಿ, ಚೇತನ್ ಕುಮಾರ್, ತರುಣ್ ಸುಧೀರ್, ಯೋಗರಾಜ್ ಭಟ್ , ಜೋಗಿ‌ ಪ್ರೇಮ್, ಎಪಿ ಅರ್ಜುನ್,
ಕೆ.ಪಿ ಶ್ರೀಕಾಂತ್, ಕಾರ್ತಿಕ್, ಕೆ.ಮಂಜು, ಜಯಣ್ಣ ಭೋಗೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪವನ್ ಒಡೆಯರ್ ನಿರ್ದೇಶನದ , ಜಯಾದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಪಕ ಸಿ.ಆರ್ ಮನೋಹರ್ ನಿರ್ಮಾಣದಲ್ಲಿ ಪವನ್ ಒಡೆಯರ್ ನಿರ್ದೇಶನದ “ರೇಮೊ” ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ 25ನೇ ತಾರೀಖು ಗ್ರ್ಯಾಂಡ್ ಆಗಿ ಲಾಂಚ್ ಆಗ್ತಿದೆ.

ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ನಾಯಕನಾಗಿ , ಅಶಿಕಾ ರಂಗನಾಥ್ ನಾಯಕಿಯಾಗಿ, ಶರತ್ ಕುಮಾರ್, ಮಧುಬಾಲ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ವೈದಿ ಛಾಯಾಗ್ರಹಣವಿರೋ ಈ ಚಿತ್ರದ ಮೇಲೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಹುಟ್ಟಿಸಿದೆ. ಇತ್ತೀಚಿಗಷ್ಟೇ
ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದಿದ್ದು , ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ ಚಿತ್ರತಂಡ.

ಹೊಸ ವರ್ಷಕ್ಕೆ ಚಿತ್ರವನ್ನ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ. ಈ ನಡುವೆ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಮುಂದಾಗಿದ್ದು , ಈ ಟೀಸರ್ ನ ಚಿತ್ರರಂಗದ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಲಾಂಚ್ ಮಾಡ್ತಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ರಿಲೀಸ್ ಆಗ್ತಿದೆ.

Related posts