Cinisuddi Fresh Cini News 

ರಾರಾಜಿಸುತ್ತಿವೆ “ರತ್ನಮಂಜರಿ”ಯ ಸಾಂಗ್ಸ್

ರತ್ನಮಂಜರಿ ಚಿತ್ರದ ಒಮ್ಮೆ ನನ್ನವಳು ನಕ್ಕರೆ ಸಾಂಗ್ ಎಲ್ಲ ಸಂಗೀತ ಪ್ರಿಯರನ್ನು ಮತ್ತೆ ಮತ್ತೆ ಕೇಳುವಂತೆ ಅಕರ್ಷಿಸಿದೆ. ಕಾರಣ ಕೆ.ಕಲ್ಯಾಣ್ ರವರ ಹಿತಕರವಾದ ಸಾಹಿತ್ಯ ಭಂಡಾರ.

ಮಿಸ್ ಮಾಡದೇ ಹಾಡನ್ನು ನೀವೂ ಕೇಳಿ.ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಬಿಡುಗಡೆಗೊಳಿಸಿರುವ ರತ್ನಮಂಜರಿ ಚಿತ್ರದ ” ಒಮ್ಮೆ ನನ್ನವಳು ನಕ್ಕರೆ ” ಸಾಂಗ್ ಈಗಾಗಲೇ 1ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕ್ರಮಿಸಿ ಮುನ್ನುಗ್ಗುತ್ತಿದೆ .

ಟಿಪ್ಪು ಹಾಗೂ ಸುಪ್ರಿಯಾ ಲೋಹಿತ್ ಹಾಡಿರುವ ಈ ಹಾಡು ವೈರಲ್ ಆಗಿದೆ. ಈ ಚಿತ್ರದಲ್ಲಿ ರಾಜ್ ಚರಣ್, ಅಖಿಲಾ ಪ್ರಕಾಶ್, ಸಂಚಿತಾ ಹೆಗಡೆ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಇದೊಂದು ರೋಮ್ಯಾಂಟಿಕ್, ಆಕ್ಷನ್, ಲವ್, ಹಾಗೂ ಥಿಲ್ಲರ್ ಕಥಾನಕವಾಗಿದೆಯಂತೆ. ಈ ಚಿತ್ರವನ್ನು ಪ್ರಸಿದ್ದ್ ನಿರ್ದೇಶನ ಮಾಡಿದ್ದು , ನಟರಾಜ್ ಹಳೇಬೀಡು ಹಾಗೂ ಸಂದೀಪ್ ಕುಮಾರ್ ನಿರ್ಮಿಸಿದ್ದಾರೆ. ಹರ್ಷವರ್ಧನ್ ರಾಜು ಸಂಗೀತವಿರುವ ಈ ಚಿತ್ರ ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಯ ಮೇಲೆ ಬರಲಿದೆ.

Share This With Your Friends

Related posts