Cinisuddi Fresh Cini News 

ಕೊರೋನಾ ವಾರಿಯರ್ಸ್‍ಗೆ ಊಟದ ವ್ಯವಸ್ಥೆ ಮಾಡಿದ ರಶ್ಮಿಕಾ

ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ವೈದ್ಯರು, ನರ್ಸ್‍ಗಳು ಹಾಗೂ ಪೊಲೀಸರು ಸೇರಿದಂತೆ ಸಾಕಷ್ಟು ಜನರು ಹಗಲಿರುಳು ಎನ್ನದೆ ದುಡಿಯುತ್ತಿದ್ದಾರೆ. ಇಂಥವರ ಸೇವೆಯನ್ನು ಗಮನಿಸಿದ ಕಿರಿಕ್ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಕೊರೋನಾ ವಾರಿಯರ್ಸ್ ಹಸಿವು ನೀಗಿಸುತ್ತಿದ್ದಾರೆ.

ಕೊಡಗು ಜಿಲ್ಲಾ ವಿರಾಜಪೇಟೆಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳಿಗೆ ನಟಿ ರಶ್ಮಿಕಾ ಮಂದಣ್ಣ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ವೈದ್ಯರು, ನರ್ಸ, ಪೊಲೀಸ್ ಮತ್ತು ಹೋಂ ಗಾರ್ಡ್ ಸೇರಿದಂತೆ ಒಟ್ಟು 150 ಜನ ಕೊರೊನಾ ವಾರಿಯರ್ಸ್‍ಗಳಿಗೆ ರಶ್ಮಿಕಾ ಮಂದಣ್ಣ ಪ್ರತಿದಿನ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ತಮ್ಮ ಒಡೆತನದ ಸೆರೆನಿಟಿ ಹಾಲ್‍ ನಲ್ಲೆ ಅಡುಗೆ ಮಾಡಿಸಿ ಕೊರೋರಾ ವಾರಿಯರ್ಸ್‍ಗಳಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ 7 ರಿಂದ ಇಷ್ಟು ಜನರಿಗೂ ಪ್ರತಿದಿನ ಊಟದ ವ್ಯವಸ್ಥೆ ಮಾಡುತ್ತಿದ್ದು, ಲಾಕ್ಡೌನ್ ಮುಗಿಯುವವರೆಗೆ ಈ ಊಟದ ವ್ಯವಸ್ಥೆ ಮುಂದುವರಿಯಲಿದೆಯಂತೆ.

ಬಿಸಿಲಿನಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸರನ್ನು ಕಂಡು ರಶ್ಮಿಕಾ ಮಂದಣ್ಣ ಅವರೆಲ್ಲರಿಗೂ ನಿರಂತರವಾಗಿ ಊಟದ ವ್ಯವಸ್ಥೆ ಮಾಡುವಂತೆ ತಮ್ಮ ತಂದೆಯ ಬಳಿ ಹೇಳಿದ್ದರು. ಹೀಗಾಗಿ ಅಂದಿನಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

Share This With Your Friends

Related posts