Bollywood Cinisuddi Fresh Cini News 

ಬಾಲಿವುಡ್ ನಲ್ಲಿ ಒಂದು ದಶಕವನ್ನು ಪೂರೈಸಿದ ರಣವೀರ್‌ ಸಿಂಗ್‌

ಭಾರತೀಯ ಸಿನಿಮಾ ರಂಗದಲ್ಲಿ ರಣವೀರ್‌ ಸಿಂಗ್‌ ಮಹತ್ವದ ನಟನಾಗಿದ್ದಾರೆ ಮತ್ತು ಯುವ ಸಮೂಹದ ಸೂಪರ್‌ಸ್ಟಾರ್‌ ಆಗಿದ್ದಾರೆ. ಪದ್ಮಾವತ್‌ ಸಿನಿಮಾ ಮೂಲಕ 300 ಕೋಟಿ ರೂ. ಗಳಿಕೆ ಮಾಡಿದ ಮೊದಲ ಯುವ ನಟ ಇವರು. ಅವರು ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಪ್ರತಿಬಿಂಬಿಸುತ್ತಾರೆ.

ಅತ್ಯಂತ ಯಶಸ್ವಿ, ಸ್ವಯಂ ರೂಪುಗೊಂಡ ರೋಲ್‌ ಮಾಡೆಲ್‌ ಆಗಿ ಅವರು ತಮ್ಮ ಸ್ಟೇಟಸ್ ಅನ್ನು ಸಾಬೀತುಪಡಿಸಿದ್ದಾರೆ. ಭಾರತೀಯ ಸಿನಿಮಾ ವಲಯದ ಹೊರಗಿನಿಂದ ಬಂದು ಅವರು ಈ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ಡಿಸೆಂಬರ್‌ 10 ರಂದು, ಸಿನಿಮಾದಲ್ಲಿ ಒಂದು ದಶಕವನ್ನು ಪೂರೈಸಿದ್ದಾರೆ. ಇವರು ಮೊದಲು ಅಭಿನಯಿಸಿದ ಬ್ಯಾಂಡ್‌ ಬಾಜಾ ಬಾರಾತ್‌ ತನ್ನ 10ನೇ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. 10 ವರ್ಷಗಳ ಅವರ ಪಯಣವನ್ನು ನೋಡಿದರೆ, ಅವರ ಪ್ರತಿಭೆ ಮತ್ತು ವೈವಿಧ್ಯತೆಯೇ ಅವರನ್ನು ಭಾರತೀಯ ಸಿನಿಮಾದಲ್ಲಿ ಈ ಮಹತ್ವದ ಎತ್ತರಕ್ಕೆ ಕೊಂಡೊಯ್ದಿದೆ ಎಂಬುದನ್ನು ತಿಳಿಸುತ್ತದೆ.

ಅತ್ಯಂತ ಪರಿಣಿತ ಪರ್ಫಾರ್ಮರ್ ಆಗಿರುವ ರಣವೀರ್‌, ವಿವಿಧ ಜಾನರ್‌ ಮತ್ತು ಪಾತ್ರಗಳಲ್ಲಿ ತಮ್ಮ ನಟನೆಯನ ಪರಿಣಿತಿಯನ್ನು ಅವರು ತೋರಿಸಿದ್ದಾರೆ. ಬ್ಯಾಂಡ್ ಬಾಜಾ ಬಾರಾತ್‌ನಲ್ಲಿನ ಇಷ್ಟವಾಗುವ ಬಿಟ್ಟು ಶರ್ಮ ಪಾತ್ರವಾಗಿರಲಿ, ಲೂಟೆರಾದಲ್ಲಿ ಮೃದು ಹೃದಯದ ಚಾಣಾಕ್ಷ ಕಳ್ಳನ ಪಾತ್ರ, ರಾಮ್‌ಲೀಲಾದಲ್ಲಿ ರೋಮಿಯೋ ಪಾತ್ರ, ಬಾಜಿರಾವ್‌ ಮಸ್ತಾನಿಯಲ್ಲಿ ತೀಕ್ಷ್ಣ ನೋಟದ ಪೇಶ್ವಾ ಬಾಜಿರಾವ್‌, ದಿಲ್‌ ಧಡಕನೆ ದೋ ಸಿನಿಮಾದಲ್ಲಿನ ಸಮಾಧಾನ ಚಿತ್ತದೆ ಮತ್ತು ಅತ್ಯಂತ ಸಂಕೀರ್ಣ ಮನಸ್ಥಿತಿಯ ಕಬೀರ್ ಮೆಹ್ತಾ, ಪದ್ಮಾವತ್‌ನಲ್ಲಿ ಅತ್ಯಂತ ಚಾಣಾಕ್ಷ ಅಲ್ಲಾವುದ್ದೀನ ಖಿಲ್ಜಿ, ಸಿಂಬಾದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿ ಮತ್ತು ಗಲ್ಲಿ ಬಾಯ್‌ನಲ್ಲಿ ಬೀದಿ ಬದಿಯ ಗಾಯಕನಾಗಿ ಮುರಾದ್ ಪಾತ್ರದ ಮೂಲಕ ತನ್ನ ಕಾಲದ ಇತರ ಎಲ್ಲ ನಟರಿಗಿಂತ ವೈವಿಧ್ಯತೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸೂಪರ್‌ಸ್ಟಾರ್‌ಡಮ್‌ ಕಡೆಗೆ ಅವರ ಈ 10 ವರ್ಷದ ಪಯಣದಲ್ಲಿ, ಶೋ ಬ್ಯುಸಿನೆಸ್‌ನ ಅತ್ಯಂತ ಉತ್ತಮ ಶೋಮನ್‌ ರಣವೀರ್‌, ತನ್ನ ಈ ಪಯಣ, ನಿರೀಕ್ಷೆಗಳು ಮತ್ತು ಕನಸುಗಳು, ಮೊದಲ ಸಿನಿಮಾಗೂ ಮೊದಲು ಎದುರಿಸಿದ ಸಂಕಷ್ಟಗಳ ಬಗ್ಗೆ ಮತ್ತು ಅವರು ದಾಖಲಿಸಲು ಬಯಸಿದ ಇತಿಹಾಸದ ಕುರಿತು ಅವರು ಮಾತನಾಡಿದ್ದಾರೆ.

ಪ್ರಶ್ನೆ: ರಣವೀರ್‌ ಸಿಂಗ್‌ ಎಂಬ ಬ್ರಾಂಡ್‌ಗೆ ಡಿಸೆಂಬರ್ 10ರಂದು 10 ವರ್ಷ ಪೂರೈಸುತ್ತದೆ. ಈಗ ನಿಂತು ತಿರುಗಿ ನೋಡಿದರೆ, ಈ 10 ವರ್ಷಗಳಲ್ಲಿ ಯಾವ ಕ್ಷಣಗಳು ಅತಿದೊಡ್ಡ ವೃತ್ತಿ ಮೈಲಿಗಲ್ಲು ಎಂಬುದಾಗಿ ಕಾಣಿಸುತ್ತದೆ ಮತ್ತು ಯಾಕೆ?

ವೃತ್ತಿಯಲ್ಲಿ ಎಲ್ಲಕ್ಕಿಂತ ಅತಿದೊಡ್ಡ ಮೈಲಿಗಲ್ಲು ಎಂದರೆ, ನನ್ನ ಮೊದಲ ಸಿನಿಮಾಗೆ ನಾನು ಆಯ್ಕೆಯಾಗಿದ್ದು. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾಗದು. ಈಗ ನಾನು ಅದರ ಬಗ್ಗೆ ಯೋಚಿಸಿದರೂ ನನಗೆ ಅಚ್ಚರಿಯಾಗುತ್ತದೆ. ನನ್ನ ರೀತಿಯ ಹಿನ್ನೆಲೆ ಇರುವ ಯಾರಿಗೂ ಕನಸಿನಲ್ಲೂ ಈ ರೀತಿಯ ಅವಕಾಶ ಸಿಗುವುದಿಲ್ಲ. ಅದು ನಿಜಕ್ಕೂ ಕನಸಿನ ಮಾತೇ ಆಗಿತ್ತು.

ಒಮ್ಮೆ ಅದೃಷ್ಟ ತಿರುಗಿದ ನಂತರ, ಕಲಿಯುವುದು ಮತ್ತು ಬೆಳೆಯುವುದರ ಪಯಣ ಸಾಗಿತು. ಕ್ರಿಯಾಶೀಲ ವ್ಯಕ್ತಿ, ಪರ್ಫಾರ್ಮರ್‌ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ನಾನು ರೂಪುಗೊಂಡೆ. ವರ್ಷ ಕಳೆದಂತೆ ಮತ್ತು ಪ್ರತಿ ಸಿನಿಮಾದಲ್ಲಿ ನಟಿಸಿದಂತೆಯೇ ನಾನು ಇನ್ನಷ್ಟು ಹೊಸ ಹೊಸ ಸಂಗತಿಗಳನ್ನು ಕಲಿಯುತ್ತಾ ಹೋದೆ. ನಾನು ನನ್ನನ್ನು ಸುಧಾರಿಸಿಕೊಳ್ಳುತ್ತಾ ಮತ್ತು ನನ್ನ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುತ್ತಲೇ ಸಾಗಿದೆ.

ಪ್ರತಿ ಸಿನಿಮಾ ಮತ್ತು ಪ್ರತಿ ಪಾತ್ರದ ಮೂಲಕ ನಾನು ನನ್ನನ್ನು ಇನ್ನಷ್ಟು ಅನಾವರಣಗೊಳಿಸಿಕೊಳ್ಳುತ್ತಲೇ ಸಾಗಿದೆ. ಕೆಲವು ಬಾರಿ ನಾವು ಬೇರೆಯವರಾಗುತ್ತಾ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಅನುಭವ ಮತ್ತು ಪ್ರತಿ ಸಿನಿಮಾ ಕೂಡ ಸ್ವಲ್ಪ ಹೆಚ್ಚು ತೆರೆದುಕೊಳ್ಳಲು ಅವಕಾಶ ಮಾಡಿತು. ಈ ಮೂಲಕ ನಾನು ಪ್ರತಿ ಅವಕಾಶಕ್ಕೂ ಆಭಾರಿಯಾಗಿದ್ದೇನೆ.

ಪ್ರಶ್ನೆ: ನೀವು ಸ್ವಯಂ ರೂಪುಗೊಂಡ ಸೂಪರ್‌ಸ್ಟಾರ್‌. ಇತ್ತೀಚೆಗೆ ಅನುರಾಗ್‌ ಕಶ್ಯಪ್‌, ನಿಖಿಲ್‌ ಅಡ್ವಾಣಿ ಹಾಗೂ ಇನ್ನೂ ಕೆಲವರು ಹೇಳುವಂತೆ ಬ್ಯಾಂಡ್‌ ಬಾಜಾ ಬಾರಾತ್‌ನಲ್ಲಿ ನಟನೆಗೆ ಆಗಮಿಸುವುದಕ್ಕೂ ಮೊದಲು ನೀವು ಹಲವು ಬಾರಿ ತಿರಸ್ಕಾರಕ್ಕೊಳಗಾಗಿದ್ದೀರಿ. ನೀವು ಅನಿಶ್ಚಿತತೆಯನ್ನು ಎದುರಿಸಿದ ಸಮಯದ ಬಗ್ಗೆ ಮತ್ತು ಬಹುಮಾನದ ಮೇಲೆ ನೀವು ಕಣ್ಣಿಟ್ಟಿದ್ದರ ಬಗ್ಗೆ ನನಗೆ ಹೇಳಿ.

ನಾನು ಸಿನಿಮಾದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದ ದಿನಗಳು ಸುಲಭದ್ದೇನೂ ಆಗಿರಲಿಲ್ಲ. ಆ ಸಮಯದಲ್ಲಿ ಆರ್ಥಿಕ ಹಿಂಜರಿಕೆ ಇತ್ತು. ಸಿನಿಮಾ ವ್ಯಾಪಾರ ಅಷ್ಟೇನೂ ಚೆನ್ನಾಗಿ ನಡೆಯುತ್ತಿರಲಿಲ್ಲ. ಸಿನಿಮಾಗಳೇ ಕಡಿಮೆ ನಿರ್ಮಾಣವಾಗುತ್ತಿದ್ದವು. ಹೀಗಾಗಿ, ಈಗಿನ ನಟರಿಗಿಂತ ಆಗ ನಟರಿಗೆ ಅವಕಾಶಗಳು ಕಡಿಮೆ ಇದ್ದವು. ಈ ವೆಬ್‌ ಪ್ಲಾಟ್‌ಫಾರಂಗಳು, ಒಟಿಟಿ ಪ್ಲಾಟ್‌ಫಾರಂಗಳು ಇತ್ಯಾದಿ ಇರಲಿಲ್ಲ. ಹೀಗಾಗಿ, ಒಳ್ಳೆಯ ಅವಕಾಶಗಳು ಸಿಗುವುದೇ ಕಷ್ಟವಾಗುತ್ತಿತ್ತು. 3-3.5 ವರ್ಷಗಳವರೆಗೆ ಸುಮ್ಮನೆ ಹುಡುಕುತ್ತಿದ್ದೆ, ಹಲವು ಅವಕಾಶಗಳನ್ನು ಪ್ರಯತ್ನಿಸುತ್ತಿದ್ದೆ, ಒಂದು ಬ್ರೇಕ್‌ಗೆ ಕಾಯುತ್ತಿದ್ದೆ

Related posts