Cinisuddi Fresh Cini News 

‘ರಂಗಸಮುದ್ರ’ ಫಸ್ಟ್ ಲುಕ್ ಅನಾವರಣಗೊಳಿಸಿದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು, ಇಂದು (ಜ.18)ಸಂಜೆ 06.05ಕ್ಕೆ ಹೊಯ್ಸಳ ಕ್ರಿಯೇಷನ್ಸ್ ರವರ ನೂತನ ಚಿತ್ರ ‘ರಂಗಸಮುದ್ರ’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.

ಚಿತ್ರದ ನಿರ್ಮಾಪಕ ಹೊಯ್ಸಳ, ಕಾರ್ಯಕಾರಿ ನಿರ್ವಾಹಕ ನಿತಿನ್ ಪಟೇಲ್ , ನಿರ್ದೇಶಕ ರಾಜಕುಮಾರ್ ಅಸ್ಕಿ, ಸಂಕಲನಕಾರ ಉದಯ್ ಜಗಳೂರು ಮತ್ತು ಚಿತ್ರಕ್ಕೆ ಸಾಹಿತ್ಯ ರಚಿಸಿರುವ ವಾಗೀಶ್ ಚನ್ನಗಿರಿ ಈ ಸಂದರ್ಭದಲ್ಲಿ ಹಾಜರಿದ್ದರು.

ರೆಟ್ರೋ ಕಥಾನಕವುಳ್ಳ ಚಿತ್ರದ ವಿವರಗಳು ಬಹಿರಂಗವಾಗಿಲ್ಲ, ಆದರೆ ಬಿಡುಗಡೆಯಾದ ಪೋಸ್ಟರ್ ನಲ್ಲಿ ಕಹಳೆಯನ್ನು ಎತ್ತಿ ಹಿಡಿದಿರುವ ಚಿತ್ರ ಗಮನ ಸೆಳೆಯುತ್ತಿದೆ. ಪೋಸ್ಟರ್ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಸುದೀಪ್ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈಗಾಗಲೇ ಶೇ.80 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ತಂಡಕ್ಕೆ ಸುದೀಪ್ ಅವರು, ಚಿತ್ರದ ಶೀರ್ಷಿಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವುದು ತಂಡಕ್ಕೆ ಎಕ್ಸೈಟ್ ಮೆಂಟ್ ಉಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ‘ರಂಗಸಮುದ್ರ’ ಚಿತ್ರ ಸಂಚಲನ ಮೂಡಿಸಿದೆ.

Related posts