Cinisuddi Fresh Cini News 

ಚಂದನವನಕ್ಕೆ ಮತ್ತೋಬ್ಬ ರಾಮಾಚಾರಿ ಎಂಟ್ರಿ

ನಾಗರಹಾವು ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ರಾಮಾಚಾರಿಯಾಗಿ ಖ್ಯಾತಿಗೊಂಡಿದ್ದರು. ನಂತರ ರವಿಚಂದ್ರನ್, ಯಶ್ ಇದೇ ಹೆಸರಿನೊಂದಿಗೆ ನಟಿಸಿ ಹೆಸರು ಮಾಡಿದ್ದರು. ಈಗ ಇದರ ಸಾಲಿಗೆ ‘ರಾಮಾಚಾರಿ 2.0’ ಚಿತ್ರವು ಸೇರ್ಪಡೆಯಾಗಿದೆ. ರಜನಿಕಾಂತ್ ನಟಿಸಿರುವ 2.0, ಯಶಸ್ಸು ಗಳಿಸಿದ್ದರಿಂದ ಇದನ್ನು ಹೆಸರಿನೊಂದಿಗೆ ಸೇರಿಸಲಾಗಿದೆ.

ಕತೆ ಹೊಸ ಜಾನರ್‍ದಲ್ಲಿರುವುದರಿಂದ ಇಂತಹುದೆ ಅಂಥ ಹೇಳಲು ಬರುವುದಿಲ್ಲವಂತೆ. ‘ಮೀಸೆ ಚಿಗುರಿದಾಗ’ ಚಿತ್ರದ ನಂತರ ಇಂಜನಿಯಿರಿಂಗ್ ಮುಗಿಸಿ, ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡಿ, ಸದ್ಯ ವಿಜ್ಘಾನಿಯಾಗಿರುವ ಕನ್ನಡಿಗ ತೇಜ್ ಕಾಲಿವುಡ್‍ದಲ್ಲಿ ಗುರುತಿಸಿಕೊಂಡಿದ್ದರು. ನಂತರ ‘ರಿವೈಂಡ್’ ಕನ್ನಡ ಸಿನಿಮಾಕ್ಕೆ ನಟನೆ, ನಿರ್ದೇಶನ ಮಾಡಿದ್ದು, ಅದು ಸದ್ಯದಲ್ಲೆ ತೆರೆಗೆ ಬರುವ ಸಾದ್ಯತೆ ಇದೆ.

ಎರಡನೆ ಅನುಭವ ಎನ್ನುವಂತೆ ಕತೆ,ನಿರ್ದೆಶನ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೂಲ ಸಿನಿಮಾದ ರಾಮಾಚಾರಿ ಹೋಲಿಕೆ ಇರುತ್ತದೆ. ಧೈರ್ಯವಂತ, ಗುರುಗಳ ಮೇಲೆ ಭಕ್ತಿ, ಸ್ವಾಭಿಮಾನಿ. ಸ್ವಲ್ಪ ಬದಲಾವಣೆÉ ಎಂದರೆ, ಈ ಕಾಲದ ಬುದ್ದಿವಂತ ಹಳ್ಳಿ ಹುಡುಗ ಅಪ್‍ಡೇಟೆಡ್ ಆಗಿರುವುದರಿಂದ 2.0 ಎಂದು ಹೇಳಿಕೊಂಡಿದೆ. ಆಲ್ಬರ್ಟ್‍ಐನ್‍ಸ್ಟೈನ್‍ದಂತೆ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾನೆಂದು ಇತ್ಯಾಹ್ಮಕವಾಗಿ ತೋರಿಸಲಾಗುವುದು.

   ಡಾ.ರಾಜ್‍ಕುಮಾರ್ ಅವರ ಸಾಕಷ್ಟು ಚಿತ್ರಗಳಿಗೆ ಸ್ಥಿರ ಛಾಯಾಗ್ರಾಹಕರಾಗಿದ್ದ  ಪ್ರವೀಣ್‍ನಾಯಕ್, ‘ಓಂ’ ಚಿತ್ರಕ್ಕೆ ಶಿವರಾಜ್‍ಕುಮಾರ್ ಫಸ್ಟ್ ಲುಕ್‍ನ್ನು ಎರಡು ಲೈಟ್ಸ್‍ಗಳನ್ನು ಬಳಸಿಕೊಂಡು ಪೆಂಟೆಕ್ಸ್ 1000 ಕ್ಯಾಮಾರದಲ್ಲಿ ಕ್ಲಿಕ್ಕಿಸಿದ್ದರು.  ಈಗಿನ ತಂತ್ರಜ್ಘಾನದಲ್ಲಿ ಅದೇ ರೀತಿಯಲ್ಲಿ ಫೋಟೋ ಶೂಟ್ ಮಾಡಿದ್ದನ್ನು ಮಾದ್ಯಮದ ಮುಂದೆ ಅನಾವರಣಗೊಳಿಸಲಾಯಿತು.

ತೇಜ್ ಅವರ ಕೋಪ, ನೋವು ಎರಡು ಕಾಣುವಂತೆ ಪೋಸ್ಟರ್‍ದಲ್ಲಿ ಕಾಣಿಸಿಕೊಂಡಿತ್ತು. ಸಂದೀಪ್‍ಮಲಾನಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ತಾರಾಗಣ, ತಂತ್ರಜ್ಘರ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಮೇಘನಾ ಕ್ರಿಯೇಶನ್ಸ್ ಮೂಲಕ ಸಿದ್ದಗೊಳ್ಳುತ್ತಿರುವ ಸಿನಿಮಾಕ್ಕೆ ಯುಎಸ್‍ದಲ್ಲಿರುವ ಟೆಕ್ಕಿ ಪ್ರಭಾಕರ್ ಸಹ ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ. ಕ್ಲಾಸ್ ಮೀಟ್ಸ್ ಮಾಸ್ ಅಂತ ಅಡಿಬರಹದಲ್ಲಿರುವ ಸಿನಿಮಾದ ಕೆಲಸಕಾರ್ಯಗಳು ಮುಂದಿನ ದಿನಗಳಲ್ಲಿ ಶುರುವಾಗಲಿದೆ.

Share This With Your Friends

Related posts