Cinisuddi Fresh Cini News 

ಮರಾಠಿ ಭಾಷೆಯ ‘ರಾಮಾ ರಾಮಾ ರೇ’ ಚಿತ್ರಕ್ಕೂ ಸತ್ಯಪ್ರಕಾಶ್ ಆ್ಯಕ್ಷನ್ ಕಟ್

ಲಾಕ್‍ಡೌನ್ ಆರಂಭಕ್ಕೂ ಮೊದಲು ರಾಮಾ ರಾಮಾ ರೇ ಚಿತ್ರತಂಡ ಸಿನಿಮಾವನ್ನು ಯೂಟ್ಯೂಬïನಲ್ಲಿ ಬಿಡುಗಡೆ ಮಾಡಿತು. ಆಗ ಚಿತ್ರ ಸಾಕಷ್ಟು ಜನರಿಂದ ವೀಕ್ಷಣೆಯಾಗಿದ್ದು ಮಾತ್ರವಲ್ಲದೆ, ಥಿಯೇಟರಿನಲ್ಲಿ ವೀಕ್ಷಿಸಲಾಗದ ಅನೇಕ ಸಿನಿ ರಸಿಕರು ಯೂಟೂಬ್ ಮೂಲಕ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.

ಡಿ. ಸತ್ಯಪ್ರಕಾಶ್ ಅವರ ಪ್ರಥಮ ನಿರ್ದೇಶನದಲ್ಲಿ ತಯಾರಾದ ಚಿತ್ರ ಇದಾಗಿದ್ದು, ರಾಮಾ ರಾಮಾ ರೇ 2016ರಲ್ಲಿ ಬಿಡುಗಡೆಗೊಂದು ಅಪಾರ ಸಿನಿ ಪ್ರೇಕ್ಷರನ್ನು ರಂಜಿಸಿತ್ತು. ಸಾಕಷ್ಟು ಜನ ಈ ಚಿತ್ರವನ್ನು ನೋಡಿ ಇಷ್ಟಪಟ್ಟಿದ್ದರು. ಅಲ್ಲದೆ ಪರ ಭಾಷೆಗಳಿಂದ ಕೂಡ ರಿಮೇಕ್ ಮಾಡುವುದಕ್ಕೆ ಸಾಕಷ್ಟು ಬೇಡಿಕೆ ಬಂತು.

ಹಾಗೂ ಟಾಲಿವುಡ್‍ನಲ್ಲೂ ಸಹ ಈ ಸಿನಿಮಾ ರಿಮೇಕ್ ಆಯಿತು. ಇದೀಗ ರಾಮಾ ರಾಮಾ ರೇ ಸಿನಿಮಾ ಮರಾಠಿ ಭಾಷೆಯತ್ತಲೂ ಹೊರಟಿದೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ರಾಮಾ ರಾಮಾ ರೇ ಸಿನಿಮಾವನ್ನು ಮರಾಠಿ ಬಾಷೆಗೆ ರಿಮೇಕ್ ಮಾಡಲು ಮುಂದಾಗಿದೆ. ಸತ್ಯ ಪಿಕ್ಚರ್ಸ್ ಸಹಯೋಗದೊಂದಿಗೆ ಮರಾಠಿ ಬಾಷೆಗೆ ಈ ಚಿತ್ರ ರೀಮೇಕ್ ಆಗುತ್ತಿದೆ.

ಲಾಕ್‍ಡೌನ್ ಬಳಿಕ ರಾಮ ರಾಮ ರೇ ಚಿತ್ರದ ಮರಾಠಿ ಅವತರಣಿಕೆಯ ಮುಂದಿನ ಕೆಲಸಗಳು ಶುರುವಾಗಲಿದೆ. ಚಿತ್ರದ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಂತರದ ದಿನಗಳಲ್ಲಿ ತಿಳಿಸುತ್ತೇನೆ ಎಂದು ನಿರ್ದೇಶಕ ಸತ್ಯಪ್ರಕಾಶ್ ಅವರು ಹೇಳಿದ್ದಾರೆ.

ರಾಮಾ ರಾಮಾ ರೇ ಸಿನಿಮಾದಲ್ಲಿ ಜಯರಾಮï, ಧರ್ಮಣ್ಣ , ಕಡೂರು ನಟರಾಜ್, ಬಿಂಬಶ್ರೀ, ಎಂ.ಕೆ. ಮಠ ಮುಂತಾದವರು ನಟಿಸಿದ್ದಾರೆ. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ಸಯೋಜನೆ ಮಾಡಿದ್ದಾರೆ.

ರಾಮಾ ರಾಮಾ ರೇ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಲ್ಲದೆ ನಿರ್ದೇಶಕ ಸತ್ಯಪ್ರಕಾಶ್‍ಗೆ ರಾಜ್ಯ ಪ್ರಶಸ್ತಿಗಳನ್ನು ಕೂಡಾ ತಂದುಕೊಟ್ಟಿತು. ಅಂತೆಯೇ, ಗಾಯಕಿ ಅನನ್ಯಾ ಭಟ್‍ಗೆ ಫಿಲಂ ಫೇರ್ ಪ್ರಶಸ್ತಿ ದೊರೆಯಲು ಕಾರಣವಾಯಿತು.

Share This With Your Friends

Related posts