Cinisuddi Fresh Cini News Tollywood 

ಸಾಲು ಸಾಲು ಸಿನಿಮಾಗಳಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬ್ಯುಸಿ

ಲಾಸ್ ಎಂಜಲೀಸ್ ನಿಂದ ವಾರಂಗಲ್ ವರೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಎಸ್. ಎಸ್ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದ ಅಮೋಘ ಅಭಿನಯದ ಮೂಲಕ ರಾಮ್ ಚರಣ್ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.ಆರ್ ಆರ್ ಆರ್ ನಂತರ ರಾಮ್ ಚರಣ್ ಕ್ರೇಜ್ ಹಾಗೂ ಅಭಿಮಾನಿ ಬಳಗ ಕೂಡ ದೊಡ್ಡದಾಗಿದ್ದು, ಅವರ ಮುಂದಿನ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ.

ಮೆಗಾ ಪವರ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ.ಇಬ್ಬರ ಕಾಂಬಿನೇಶನ್ ಮೇಲೆ ಮೆಗಾ ಫ್ಯಾಮಿಲಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಗ್ ಬಜೆಟ್ ನಲ್ಲಿ ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಸಿನಿಮಾ ನಿರ್ಮಾಣವಾಗುತ್ತಿದ್ದು, ಬಾಲಿವುಡ್ ಬೆಡಗಿ ಕಿಯಾರ ಅಡ್ವಾಣಿ ರಾಮ್ ಚರಣ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಇದೇ ವರ್ಷ ಸಿನಿಮಾ ಬಿಡುಗಡೆಯಾಗುವ ಸಾದ್ಯತೆಯೂ ಇದೆ. ಸದ್ಯದ್ಲಲೇ ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾ ನಂತರ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣದ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಜೆರ್ಸಿ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ ಸಿನಿಮಾಗೂ ಮೆಗಾ ಪವರ್ ಸ್ಟಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಟ್ನಲ್ಲಿ, ಆರ್ ಆರ್ ಆರ್ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಬರೆಯೋದ್ರ ಜೊತೆಗೆ ಮೆಗಾ ಪವರ್ ಸ್ಟಾರ್ ಕೆರಿಯರ್ ಗೂ ಹೊಸ ಮೆರಗು ನೀಡಿದೆ.

Related posts