Cinisuddi Fresh Cini News 

ಕಿರುತೆರೆ ಸ್ಟಾರ್ ರಕ್ಷ್ ಗೆ ಜನ್ಮದಿನದ ಸಂಭ್ರಮ

ಕನ್ನಡ ಕಿರುತೆರೆ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟಾರ್ ನಟ ರಕ್ಷಿತ್. ಹಲವಾರು ವರ್ಷಗಳಿಂದ ಸ್ಮಾಲ್ ಸ್ಕ್ರೀನ್ ಮೂಲಕ ಕಲಾ ಸರಸ್ವತಿ ಪೂಜೆ ಮಾಡ್ತಿರೋ ರಕ್ಷಿತ್ ಗೆ ಇಂದು ಜನ್ಮದಿನದ ಸಂಭ್ರಮ. ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ನಂಬರ್ ಒನ್ ಸೀರಿಯಲ್ ಪುಟ್ಟಗೌರಿ ಮದುವೆ ಹಾಗೂ ಈಗಿನ ಗಟ್ಟಿಮೇಳ ಧಾರಾವಾಹಿಯ ವರೆಗೆ ತಾವು ತಮ್ಮ ಸ್ಥಾನ ಉಳಿಸಿಕೊಂಡು ಬಂದಿರುವ ನಾಯಕ ರಕ್ಷ್, ಕಿರುತೆರೆಯಲ್ಲಿ ಬಹುದೊಡ್ಡ ಹೆಸರು ಗಳಿಸಿರುವ Rock Star ರಕ್ಷ್ ಗೆ ಅಭಿಮಾನಿಗಳು ಕಿರುತೆರೆಯ ಡಿ ಬಾಸ್ ಎಂದು ಹಾಗೂ ಸೀರಿಯಲ್ ಲೋಕದ Badshah ಎಂದು ಹೇಳ್ತಾರೆ.

ಜನ ಮೆಚ್ಚಿದ ನಾಯಕ ಪಟ್ಟ ಪ್ರತಿ ವರ್ಷ ರಕ್ಷ್ ಗಳಿಸಿಕೊಂಡಿದ್ದಾರೆ, ಹಾಗೆಯೇ ರಕ್ಷ್ ಬೆಳ್ಳಿತೆರೆಯಲ್ಲೂ ತಮ್ಮ ಅಭಿನಯದ ಚಾಪು ಮೂಡಿಸಿದ್ದು , ಬರಿ ಕಮರ್ಷಿಯಲ್ ಸಿನಿಮಾ ಬರುತ್ತಿರುವ ಸಮಯದಲ್ಲಿ ರೈತರ ಬಗ್ಗೆ ಕಾಳಜಿ ಇರುವಂತಹ ಮಣ್ಣು , ನೀರನ ಹಾಗೂ ಹೋರಾಟದ ನರಗುಂದ ಬಂಡಾಯದ ಸಿನಿಮಾ ಮಾಡಿ ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

ಕಿರುತೆರೆ ಯಿಂದ ಬೆಳ್ಳಿತೆರೆಗೆ ಪ್ರಯಾಣಿಸುವುದು ಅಷ್ಟು ಸುಲಭವಲ್ಲ . ಈ ದಾರಿಯಲ್ಲಿ ಹಲವಾರು ಏಳು ಬೀಳು ಕಂಡಿರೋ ರಕ್ಷ್ ಇವತ್ತು ಕಿರುತೆರೆ ಸೂಪರ್ ಸ್ಟಾರ್. ಗಟ್ಟಿಮೇಳ ಧಾರಾವಾಹಿ ಮೂಲಕವಂತೂ ಅಭಿನಯ, ಆಟಿಟ್ಯೂಡ್, ಸ್ಟೈಲ್ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ. ಮದುವೆ ಆದ್ರೂ ಸಹ ಅದೆಷ್ಟು ಹುಡ್ಗೀರ ಕ್ರಷ್ ಆಗಿದಾರೋ ಗೊತ್ತಿಲ್ಲ. ಪ್ರತಿಭಾವಂತ ರಕ್ಷಿತ್ ಗೆ ಆ ದೇವ್ರು ಒಳ್ಳೆದು ಮಾಡಲಿ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಲಿ ಎಂಬುದೇ ನಮ್ಮ ಆಶಯ.

Related posts