Cinisuddi Fresh Cini News 

ಸಪ್ತ ಸುಗಂಧದ “ಜಾತಸ್ಯ” ಅಗರಬತ್ತಿ ಲೋಕಾರ್ಪಣೆ ಮಾಡಿದ ರಾಜೇಶ್ ಕೃಷ್ಣನ್

ನಾಡಹಬ್ಬ ದಸರಾದ ಸುಸಂದರ್ಭದಲ್ಲಿ ಸಮಸ್ತ ಜನರ ಮನಸ್ಸು ಸಂತೋಷ ಪಡೆಸುವಂತಹ ಸಪ್ತ ಸುಂಗಂಧ ಭರಿತ ಹಾಗೂ ಭಕ್ತಿ ಸಿಂಚನದ ‘ಜಾತಸ್ಯ’ ಅಗರಬತ್ತಿಯನ್ನು ಭಾರತದಲ್ಲಿ ಅದರಲ್ಲೂ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಾರುಕಟ್ಟೆಗೆ ತರಲಾಗಿದೆ. ಕನ್ನಡದ ಹೆಮ್ಮೆಯ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ರವರ ಅಮೃತ ಹಸ್ತದಿಂದ ಜಾತಸ್ಯ ಅಗರಬತ್ತಿಯನ್ನ ಬಿಡುಗಡೆ ಮಾಡಲಾಯಿತು. ಹಾಗೆಯೇ www.Jatasya.in ವೆಬ್ ಸೈಟ್ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಹಾಗೂ ನಿರ್ಮಾಪಕ ಭಾಮಾ ಹರೀಶ್ ಲೋಕಾರ್ಪಣೆ ಮಾಡಿದರು.

ಸಿನಿಮಾ , ಸಂಗೀತ ಹಾಗೂ ಜಾಹೀರಾತು ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಬೆಂಗಳೂರಿನ ಪ್ರಖ್ಯಾತ “ನೆರಳು ಮೀಡಿಯಾ” ಸಂಸ್ಥೆ ‘ಜಾತಸ್ಯ’ ಅಗರ ಬತ್ತಿಯ ಪ್ರಚಾರ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡಲು ಮುಂದಾಗಿದೆ. ಇದರ ಜೊತೆಯೇ ‘ಜಾತಸ್ಯ’ ಅಗರ ಬತ್ತಿಯ ಬೆಂಗಳೂರಿನ ವಿತರಣೆಯ ಜವಾಬ್ದಾರಿಯನ್ನು ” ನೆರಳು ಮೀಡಿಯ” ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಹನುಮೇಶ್ ಪಾಟೀಲ್ ರವರು ವಹಿಸಿಕೊಂಡಿದ್ದಾರೆ.

ಈ ಸಂಸ್ಥೆಯ ಮಾಲೀಕರಾದ ಮಂಜುನಾಥ ಗುಂಡಾಲ್ ಮಾತನಾಡುತ್ತಾ ಸುಮಾರು ಒಂದೂವರೆ ವರ್ಷದಿಂದ ಪ್ಲಾನ್ ಮಾಡಿ ಈ ಅಗರ್ಬತ್ತಿಯನ್ನ ಹೊರತರುತ್ತಿದ್ದೇವೆ. ಹೆಚ್ಚು ಕೆಮಿಕಲ್ಸ್ ಇಲ್ಲದೆ 80% ಆರ್ಗ್ಯಾನಿಕ್ ಯಾಗಿ ಸಿದ್ಧಪಡಿಸಿದ್ದೇವೆ. 7ಸುಗಂಧವನ್ನು ಬೀರುವಂತಹ ವಾರದ 7ದಿನವೂ ಬಳಸುವಂಥ ಅಗರಬತ್ತಿಯನ್ನು ಹೊರತರುತ್ತಿದ್ದೇವೆ ಎಂದರು.

ಇನ್ನು ಈ ಅಗರಬತ್ತಿಯನ್ನು ಹೊರತಂದ ಗಾಯಕ ರಾಜೇಶ್ ಕೃಷ್ಣನ್ ಮಾತನಾಡುತ್ತಾ 7 ಸುಗಂಧದ ಕಿಟ್ ಗೆ 7ಸ್ವರಗಳಿಗೆ ಸಮಾನವಾಗಿದೆ. ಪೂಜೆಗೆ ನಾವು ಬಳಸುವಂತಹ ವಸ್ತುಗಳು ಆಧ್ಯಾತ್ಮಿಕ ಪರಿಮಳವನ್ನು ಬೀರುವಂತಾಗಲಿ ಎಂದು ಶುಭ ಕೋರಿದರು.

ಮತ್ತೊಬ್ಬ ಮುಖ್ಯ ಅತಿಥಿ ನಿರ್ಮಾಪಕ ಬಾ ಮಾ ಹರೀಶ್ ಮಾತನಾಡುತ್ತಾ ನಮ್ಮನ್ನು ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದು ಆಡಿಯೋ ಬಿಡುಗಡೆ ಮಾಡಿ ಕೊಡಿ ಎನ್ನುತ್ತಾರೆ. ಈ ಕಾರ್ಯಕ್ರಮಕ್ಕೆ ರಾಜೇಶ್ ಕೃಷ್ಣನ್ ರವರನ್ನ ಕರೆಸಿ ಅಗರಬತ್ತಿ ಬಿಡುಗಡೆ ಮಾಡಿಸಿದ್ದು ಬಹಳ ಸಂತೋಷವಾಗಿದೆ. ಹಾಗೆಯೇ ಜಾತಸ್ಯ ಅಗರ್ ಬತ್ತಿ ಒಳ್ಳೆ ಪ್ರಾಡಕ್ಟ್ ಯಾಗಿ ಬೆಳೆಯಲಿ ಎಂದು ಶುಭ ಕೋರಿದರು.

ಮತ್ತೊಬ್ಬ ಅತಿಥಿ ಡಿ .ಎಸ್. ರಮೇಶ್ ಮಾತನಾಡುತ್ತಾ ಈ ಜಾತಸ್ಯ ಅಗರ್ ಬತ್ತಿ ಪರಿಮಳ ಎಲ್ಲೆಡೆ ಪಸರಿಸಲಿ. ಎಲ್ಲರನ್ನ ತಲುಪುವಂತಾಗಲಿ ಎಂದು ಶುಭ ಕೋರಿದರು. ಹಾಗೆಯೇ ಈ ಈ ಪ್ರಾಡಕ್ಟ್ ನ ವಿತರಣೆ ಮಾಡುತ್ತಿರುವ ಹನುಮೇಶ್ ಪಾಟೀಲ್ ಹಾಗೂ ನಿರ್ಮಾಪಕ ಬಾಮಾ ಗಿರೀಶ್ ಕೂಡ ಹಾಜರಿದ್ದು ಸಂಸ್ಥೆಗೆ ಶುಭ ಕೋರಿದರು.

Related posts