Cinisuddi Fresh Cini News 

“ರಾಣ” ಜೊತೆ ರಾಗಿಣಿ ಸ್ಟೆಪ್ಸ್

ಶ್ರೇಯಸ್ಸ್ ಕೆ ಮಂಜು ಅಭಿನಯದ “ರಾಣ” ಚಿತ್ರದ ಹಾಡೊಂದಕ್ಕೆ ನಟಿ ರಾಗಿಣಿ ಹೆಜ್ಜೆ ಹಾಕಲಿದ್ದಾರೆ. ಶಿವು ಭೇರ್ಗಿ ಈ ಹಾಡನ್ನು ಬರೆದಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಲಿದ್ದಾರೆ.ಈ ಹಿಂದೆ “ವಿಕ್ಟರಿ” ಚಿತ್ರಕ್ಕಾಗಿ ಶಿವುಭೇರ್ಗಿ ಅವರು ಬರೆದಿದ್ದ “ಯಕ್ಕ ನಿನ್ನ ಮಗಳು ನನಗೆ” ಹಾಡು ಈಗಲೂ ಜನಪ್ರಿಯವಾಗಿದೆ.

ಈ ಹಾಡಿನಲ್ಲೂ ರಾಗಿಣಿ ಅಭಿನಯಿಸಿದ್ದರು. ಈಗ “ರಾಣ” ಚಿತ್ರಕ್ಕೂ ಶಿವು ಭೇರ್ಗಿ ಅವರು ಸೂಪರ್ ಡೂಪರ್ ಹಿಟ್ ಆಗುವ ಹಾಡೊಂದನ್ನು ಬರೆದಿದ್ದು, ರಾಗಿಣಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.. ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಶ್ರೇಯಸ್ಸ್ ಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

ಕೆ ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಕೆ.ಎಂ.ಪ್ರಕಾಶ್ ಸಂಕಲನ, ವಿಶ್ವ ಕಲಾ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿರುವ “ರಾಣ” ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ‌.

Related posts