Cinisuddi Fresh Cini News 

ಡ್ರಗ್ಸ್ ಜಾಲದಲ್ಲಿ ರಾಗಿಣಿ ಬಂಧನ , ‘ಗಾಂಧಿಗಿರಿ’ ಗತಿಯೇನು..?

ಡ್ರಗ್ಸ್ ವಿಷಯದಲ್ಲಿ ಭಾಗಿಯಾಗಿದ್ದರೆಂದು ನಟಿ ರಾಗಿಣಿ ಸದ್ಯ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಮುಂದೇನು ಎಂಬುದು ತನಿಖೆ ನಂತರ ತಿಳಿಯಲಿದೆ. ಈಗ ಪ್ರಶ್ನೆ ಅದೆಲ್ಲ. ‘ಗಾಂಧಿಗಿರಿ’ ಚಿತ್ರದಲ್ಲಿ ಇವರು ನಾಯಕಿಯಾಗಿರುವುದು ಸಮಸ್ಯೆಯಾಗಿದೆ.

ಜೋಗಿಪ್ರೇಮ್ ನಾಯಕನಾಗಿ ಅಭಿನಯಿಸುತ್ತಿದ್ದು, ನಾಲ್ಕು ವರ್ಷಗಳ ಹಿಂದೆಯೇ ಶುರುವಾಗಬೇಕಿತ್ತು. ಕಾರಣಾಂತರಗಳಿಂದ ಆಮೆ ವೇಗದಲ್ಲಿ ಇಲ್ಲಿಯವರೆಗೆ ಶೇಕಡ 80ರಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ.

ಉಳಿದುದನ್ನು ಸದ್ಯದಲ್ಲೆ ನಡೆಸಲು ತಂಡವು ಯೋಜನೆ ಮಾಡಿಕೊಂಡಿತ್ತು. ಇದಕ್ಕೆ ರಾಗಿಣಿಯವರು ಸೆಪ್ಟಂಬರ್ 14ರಿಂದ ಶೂಟಿಂಗ್‍ದಲ್ಲಿ ಪಾಲ್ಗೋಳ್ಳುವುದಾಗಿ ಹೇಳಿದ್ದರು. ಇನ್ನೇನು ಶೂಟ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿರುವಾಗಲೇ ಈಕೆಯ ಸುದ್ದಿ ತಂಡಕ್ಕೆ ದಿಗಿಲು ಬಡಿದಂತೆ ಆಗಿದೆ.

ಈ ಕುರಿತು ನಿರ್ದೇಶಕ ರಘುಹಾಸನ್ ಅವರನ್ನು ಮಾತನಾಡಿಸಿದಾಗ ಅವರಿಂದ ಬಂದ ಉತ್ತರ ಹೀಗಿತ್ತು. ಮೇಡಂ ಸೋಮವಾರದಿಂದ ಸೆಟ್‍ಗೆ ಬರುವುದಾಗಿ ಭರವಸೆ ನೀಡಿದ್ದರು. ಅದಾಗಿ ಮೂರು ದಿನದಲ್ಲೆ ಅರೆಸ್ಟ್ ಆಗಿರುವುದು, ನಮಗೆ ಚಿಂತೆ ಉಂಟುಮಾಡಿದೆ.

ಅವರಿಲ್ಲದೆ ಚಿತ್ರೀಕರಣ ಮುಂದುವರೆಸುವಂತಿಲ್ಲ. ಏಕೆಂದರೆ ಉಳಿದಿರುವ ಪ್ರತಿ ಸನ್ನಿವೇಶದಲ್ಲಿ ರಾಗಿಣಿ ಇರಲೇಬೇಕಾಗಿದೆ. ಜೊತೆಗೆ ಎರಡು ಹಾಡುಗಳು ಬಾಕಿ ಇದೆ.

ವಾಣಿಜ್ಯ ಮಂಡಳಿಯವರನ್ನು ಭೇಟಿ ಮಾಡಿದರೆ ಸದ್ಯಕ್ಕೆ ಇದರ ಬಗ್ಗೆ ಏನು ಹೇಳಲು ಆಗುವುದಿಲ್ಲ ಅಂತಾರೆ. ಇವರಿಬ್ಬರ ಜೊತೆಗೆ ಆರುಂಧತಿನಾಗ್, ರಂಗಾಯಣರಘು, ಜೆ.ಡಿ.ಚಕ್ರವರ್ತಿ ಮುಂತಾದವರು ನಟಿಸುತ್ತಿದ್ದಾರೆ,
(9) ಗಾಂಧಿಗಿರಿ ಚಿತ್ರದಲ್ಲಿ ಜೋಗಿಪ್ರೇಮ್, ರಾಗಿಣಿ

Share This With Your Friends

Related posts