Cinisuddi Fresh Cini News 

ಅನಾಥಾಶ್ರಮದಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ರಾಗಿಣಿ

ಕೊರೋನಾ ಹಾವಳಿಯಿಂದ ಇಡೀ ದೇಶವ್ಯಾಪಿ ಸಂಕಷ್ಟದಲ್ಲಿ ಸಿಲುಕಿರುವ ವಿಚಾರ ತಿಳಿದೇ ಇದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ನೆಮ್ಮದಿಯ ಬದುಕನ್ನು ಕಾಣುವುದು ತುಂಬಾ ಕಷ್ಟವಾಗಿ ಹೋಗಿದೆ. ಇದರ ನಡುವೆ ಚಿತ್ರೋದ್ಯಮ ಕೂಡ ಹೊರತಾಗಿಲ್ಲ.

ಆದರೆ ನಟಿ ರಾಗಿಣಿ ಜನರ ಕಷ್ಟಕ್ಕೆ ಸ್ಪಂದಿಸಿ ನೊಂದವರು, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನಿಂತಿರುವುದು ಶ್ಲಾಘನೀಯ. ಕಷ್ಟದಲ್ಲಿ ಇರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಮುಂದಾದ ರಾಗಿಣಿ ತಮ್ಮ ಆರ್.ಡಿ. ವೆಲ್ಫೇರ್ ವತಿಯಿಂದ ಬಹಳಷ್ಟು ಜನರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ.

ಬೆಂಗಳೂರಿನ ನಾನಾ ಭಾಗಗಳಲ್ಲಿ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ಅವರ ನೆರವಿಗೆ ಮುಂದಾಗಿದ್ದು , ಅವರು ಇದ್ದ ಸ್ಥಳಕ್ಕೆ ಹೋಗಿ ಅವರಿಗೆ ಊಟದ ವ್ಯವಸ್ಥೆ , ಆಹಾರದ ಕಿಟ್ಗಳನ್ನು ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಇದಲ್ಲದೆ ಕರೋನಾ ವಾರಿಯರ್ಸ್ ಗಳಾದ ಪೊಲೀಸ್ ಇಲಾಖೆ, ಹಾಸ್ಪಿಟಲ್ ಡಾಕ್ಟರ್ಸ್, ನರ್ಸ್ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಬಿಬಿಎಂಪಿ ವರ್ಕರ್ಸ್ ರನ್ನು ಭೇಟಿ ಮಾಡಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದವನ್ನು ಅರ್ಪಿಸಿದರು.

ಇದಲ್ಲದೆ ಕೆಲವು ಸಿಬ್ಬಂದಿಗಳೊಂದಿಗೆ ಬೆರೆತು ಅವರೊಟ್ಟಿಗೆ ಊಟವನ್ನು ಕೂಡ ಮಾಡಿದರು. ಇನ್ನು ಕೆಲವು ಪೌರ ಕಾರ್ಮಿಕರಿಗೂ ಕೂಡ ಆಹಾರದ ಕಿಟ್ಗಳನ್ನು ಕೂಡ ಈ ಸಂದರ್ಭದಲ್ಲಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಸಮಯದಿಂದ ಹಿಡಿದು ಇಲ್ಲಿ ಅವರಿಗೂ ಪ್ರತಿ ದಿನ ಹಗಲಿರುಳೆನ್ನದೆ ನೊಂದವರೇ ಸಂಕಷ್ಟಕ್ಕೆ ಧ್ವನಿಯಾಗಿರುವ ರಾಗಿಣಿ ಅವರಿಗೆ ಹಲವಾರು ಸ್ನೇಹಿತರು ಹಾಗೂ ಸಂಘ ಸಂಸ್ಥೆಗಳು ಕೂಡ ಸಾಥ್ ನೀಡಿದ್ದಾರೆ.

ರಾಗಿಣಿಯ ಜೊತೆಗೆ ಕೆಲವು ಸ್ನೇಹಿತರು ಊಟದ ವ್ಯವಸ್ಥೆ ಹಾಗೂ ಆಹಾರದ ಕಿಟ್ಟನ್ನು ಕೂಡ ನೀಡುತ್ತಿದ್ದಾರೆ. ಸರಿ ಸುಮಾರು 45 ಕ್ಕೂ ಹೆಚ್ಚು ದಿನಗಳ ಕಾಲ ರಾಗಿಣಿಯೊಂದಿಗೆ ಸ್ನೇಹಿತರು ಕೈಜೋಡಿಸಿ ನೊಂದವರ ಕಷ್ಟಕ್ಕೆ ಸಹಾಯ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಶೇಷ ಎಂದರೆ ಇದೇ ಭಾನುವಾರ ನಟಿ ರಾಗಿಣಿ ಅವರ ಹುಟ್ಟುಹಬ್ಬ. ಕೊರೋನಾ ನಡುವೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿ ಕೊಳ್ಳದೇ, ತಮ್ಮ ಅಭಿಮಾನಿಗಳಿಗೆ ಮನೆಯ ಬಳಿ ಬರದಂತೆ ಮನವಿ ಮಾಡಿದ್ದಾರೆ.

ಈ ಬಾರಿ ಅವರ ಹುಟ್ಟುಹಬ್ಬವನ್ನು ಕಾಕ್ಸ್ ಟೌನ್ ನಲ್ಲಿರುವ ಅನಾಥ ಆಶ್ರಮದಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು , ಪುಟಾಣಿ ಮಕ್ಕಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಊಟದ ವ್ಯವಸ್ಥೆಯನ್ನು ಮಾಡಿ ಅವರೊಟ್ಟಿಗೆ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಚಿತ್ರರಂಗದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿರುವ ನಟಿ ರಾಗಿಣಿಯ ಮಾನವೀಯತೆಯನ್ನ ಮೆಚ್ಚಲೇಬೇಕು. ನೊಂದವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಈ ನಟಿ ರಾಗಿಣಿಯ ಕೆಲಸಕ್ಕೆ ಚಿತ್ರೋದ್ಯಮ ಸ್ನೇಹಿತರು , ಗೆಳೆಯರು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು , ಕೊರೋನಾ ಮುಕ್ತರಾಗುವವರೆಗೂ ಇವರ ಸೇವೆ ನಿರಂತರವಾಗಿರಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

Related posts