Cinisuddi Fresh Cini News 

ಇದೇ 25ರಂದು ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭ

ಚಿತ್ರೋದ್ಯಮದಲ್ಲಿ ಮಹತ್ವದ ಛಾಪನ್ನು ಉಳಿಸಿಕೊಂಡು ವೃತ್ತಿಪರ ಸಿನಮಾ ಪ್ರಚಾರಕರ್ತರಾಗಿ ಸಾಗುತ್ತಿರುವ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿ. ಈ ಸಂಸ್ಥೆಯ ತಮ್ಮ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭವನ್ನು ಈ ಬಾರಿ 25.1.21ರಂದು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ. ಜನವರಿ 25 ಸಂಸ್ಥೆ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬವಾಗಿದ್ದು , ಅದೇ ದಿನ ಪ್ರಶಸ್ತಿ ಸಮಾರಂಭ ನಡೆಸುವುದು ವಾಡಿಕೆಯಾಗಿದೆ.

ಪ್ರತಿ ವರ್ಷ 11ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮೂಲಕ ನೀಡುತ್ತಿದ್ದೆವು. ಆದರೆ ಕಳೆದ ವರ್ಷ ಕೊರೋನಾ ಹಾವಳಿಯಿಂದ ಹೆಚ್ಚು ಚಿತ್ರಗಳು ತೆರೆಕಂಡಿಲ್ಲ. ಹಾಗಾಗಿ ಈ ಬಾರಿ ಕೇವಲ ನಾಲ್ಕು ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು , ಸೋಮವಾರ ಸಂಜೆ 5ಕ್ಕೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಸಲದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತಿದೆ.

# ಈ ಸಲದ ಪ್ರಶಸ್ತಿಗಳ ವಿವರ
1. ಶ್ರೀ ಎನ್. ಕುಮಾರ್ (ನಿರ್ಮಾಪಕರು)
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ.
2. ಶ್ರೀ ಬಾಬು ಕೃಷ್ಣಮೂರ್ತಿ (ಹಿರಿಯ ಪತ್ರಕರ್ತರು)
ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ.
3. ಶ್ರೀಮತಿ ಇಂದು ವಿಶ್ವನಾಥ್ (ಗಾಯಕಿ)
ಡಾ||ರಾಜಕುಮಾರ್ ಪ್ರಶಸ್ತಿ .
4. ಶ್ರೀ ಇಂದ್ರಜಿತ್ ಲಂಕೇಶ್ (ನಿರ್ದೇಶಕರು)
ನಿರ್ದೇಶಕ ದಿ. ಆರ್. ಶೇಷಾದ್ರಿ ಪ್ರಶಸ್ತಿ. ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರಿಂದ.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಈ ಗಣ್ಯರನ್ನು ಸನ್ಮಾನಿಸಲು ಸಿನಿಮಾ ಪ್ರಚಾರಕರ್ತರಾದ ಡಿ.ವಿ.ಸುಧೀಂದ್ರ ವೆಂಕಟೇಶ್ , ವಾಸು , ಸುನೀಲ್ ರವರು ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳುತ್ತಿದ್ದಾರೆ.

Related posts