Cinisuddi Fresh Cini News Tv / Serial 

ರಾಧಾಕೃಷ್ಣ ಧಾರಾವಾಹಿಯ ರಾಧೆಗೆ ಧ್ವನಿ ಕೊಟ್ಟಿರುವುದು ಇವರೇ

ಈಗ ಎಲ್ಲೆಲ್ಲೂ ಧಾರಾವಾಹಿಗಳದ್ದೇ ಸದ್ದು , ಭಕ್ತಿ ಪ್ರಧಾನ ಧಾರಾವಾಹಿಗಳು ಗಮನ ಸೆಳೆದದ್ದು , ರಾಧಾಕೃಷ್ಣ ಧಾರಾವಾಹಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಿರುತೆರೆ ಮತ್ತು ಹಿರುತೆರೆ ಅಲ್ಲದೇ ಅದರಾಚೆ ತಮ್ಮ ಧ್ವನಿಯ ಮೂಲಕ ಕಮಾಲ್ ಮಾಡುತ್ತಿರೋ ಬೆಂಗಳೂರು ಬೆಡಗಿ ಆಶಿಕಾ ಈಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರೋ ರಾಧಾ ಕೃಷ್ಣ ಧಾರಾವಾಹಿಯ ರಾಧೆ ಪಾತ್ರ ಸಾಕಷ್ಟು ಸದ್ದು ಮಾಡ್ತಿದೆ ಅಂದ್ರೆ ಅದಕ್ಕೆ ಕಾರಣ ಆ ಪಾತ್ರದ ಧ್ವನಿ.

ಮತ್ತು ಅದೇ ವಾಹಿನಿಯ ಮಹಾಭಾರತದಲ್ಲೂ ಕುಂತಿ ಪಾತ್ರಕ್ಕೂ ಇವರದ್ದೇ ಧ್ವನಿ. ಉದಯ ವಾಹಿನಿಯ ಶ್ರೀ ಗಣೇಶ ಧಾರಾವಾಹಿಯಲ್ಲೂ ಒಂದು ಪಾತ್ರಕ್ಕೆ ವಾಯ್ಸ್ ನೀಡಿದ್ದು, ಕಿರುತೆರೆಯಲ್ಲಿ ತನ್ನ ಧ್ವನಿಯಿಂದಲೇ ಛಾಪು ಮೂಡಿಸುತ್ತಿರೋ ಈ ಪ್ರತಿಭೆ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲೂ ತಮ್ಮ ಧ್ವನಿ ಮೂಲಕ ಪ್ರೇಕ್ಷಕರ ಮನೋರಂಜಿಸುವ ಕೆಲಸ ಮಾಡುತಿದ್ದಾರೆ.

5G, ಅನುಷ್ಕಾ, ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾಗಳಿಗೆ, ಕಪಟನಾಟಕಪಾತ್ರಧಾರಿ , ನಾಕುಮುಖ ಮತ್ತು ಮೂಕವಿಸ್ಮಿತ ಸಿನಿಮಾದ ಎರಡನೇ ಹಿರೋಯಿನ್ ಹಾಗೇನೆ ಅಳಿಲುಗಳ ಅಳಲು, ಕಥೆ ಕಥೆ, ಕವಚ, ಬದ್ರಿ vs ಮಧುಮತಿ( ಕನ್ನಡ, ತೆಲುಗು), ಭೂತಕಾಲ, ನೀವು ಕರೆಮಾಡಿದ ಚಂದಾದಾರರು, ವಿರಾಜ್, ಮಾಯಾಕನ್ನಡಿ ಸಿನಿಮಾಗಳ ನಾಯಕಿಯರ ಪಾತ್ರಗಳಿಗೆ ಧ್ವನಿಯಾಗಿದೆ ಈ ಅಗಾಧ ಪ್ರತಿಭೆ.

ಹಲವಾರು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ನಿರೂಪಣೆಯಲ್ಲೂ ಸೈ ಅನಿಸಿಕೊಂಡಿರೋ ಆಶಿಕಾ ಮನೋರಂಜನಾ ಮಾಧ್ಯಮ ಬಿಟ್ಟು ಹೊರಗಡೆನೂ ಸಹ ಸಾಕಷ್ಟು ಕಡೆಗಳಲ್ಲಿ ತಮ್ಮ ಧ್ವನಿ ತೊಡಗಿಸಿದ್ದು, ವುಮೆನ್ಸ್ ಹಾರ್ಲಿಕ್ಸ್ ಪ್ರೊಡಕ್ಟ್ ಜಾಹಿರಾತಿನ ಐದು ಭಾಷೆಗಳ ಧ್ವನಿ ಇವರದ್ದೇ.

ಹಾಗೇನೆ ಕುಕ್ಕೆ ಸುಬ್ರಮಣ್ಯ ಟೆಂಪಲ್ ನಲ್ಲೂ ಅನೌನ್ಸ್ ಮೆಂಟ್ ಗೂ ಇವರೇ ಧ್ವನಿಯಾಗಿರೋದು. ಇನ್ನೂ ಹಲವಾರು ದೇವಸ್ಥಾನಗಳಲ್ಲದೇ ಭಾರತ ಸರ್ಕಾರದ ಇಂಡಿಯನ್ ಪೋಸ್ಟ್ ಡಿಪಾರ್ಟ್ಮೆಂಟ್ IVRS ಐದು ಭಾಷೆಗೂ ಇವರೇ ವಾಯ್ಸ್ ನೀಡಿರೋದು. ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು, ಆ್ಯಪ್ ಗಳು, ಅನೇಕ ಡಾಕ್ಯೂಮೆಂಟ್ರಿಗಳು ಹೀಗೆ ಸಾಕಷ್ಟು ವಿಭಾಗಕ್ಕೆ ತನ್ನ ಧ್ವನಿ ನೀಡಿ ಎಲ್ಲಾ ಕಡೆ ಸೈ ಎನಿಸಿಕೊಂಡಿದ್ದಾರೆ.

ಇದಲ್ಲದೇ ಅನೇಕ ಪ್ರೈವೇಟ್ ಕಂಪನಿಗಳಲ್ಲಿಯೂ ಸಹ ತಮ್ಮ ಧ್ವನಿಯ ಚಾಕಚಕ್ಯತೆ ತೋರಿಸಿದ್ದಾರೆ. ಹೀಗೆ ವಿವಿಧ ವಿಭಾಗಗಳಿಗೆ, ಕಾರ್ಯಕ್ರಮಗಳಿಗೆ ತನ್ನ ಧ್ವನಿಯ ಮೂಲಕ ತಮ್ಮ ಆಗಾಧ ಪ್ರತಿಭೆ ಹೊರಹಾಕಿದ್ದಾರೆ.

ಈ ಬೆಂಗಳೂರು ಮೂಲದ ಪ್ರತಿಭೆ ಆಶಿಕಾ ನಿರೂಪಣೆ, ವಾಯ್ಸ್ ಡಬ್ಬಿಂಗ್ ಅಲ್ಲದೇ ರಂಗಭೂಮಿಯಲ್ಲೂ ಸಕ್ರೀಯರಾಗಿದ್ದಾರೆ. ಅನೇಕ ನಾಟಕಗಳಲ್ಲಿ ನಟಿಸಿ ಸೈ ಅನಿಸಿಕೊಂಡಿರೋ ಇವರು ಮುಂಚೆ ಶಿಕ್ಷಕಿ ಸಹ ಆಗಿರೋದು ಗಮನಿಸಬೇಕಾಗಿರೋ ವಿಷಯ. ಈ ಅದ್ಭುತ ಬಹುಮುಖ ಪ್ರತಿಭೆ ನಮ್ಮ ಮಧ್ಯೆ ಇರೋದು ನಮ್ಮೆಲ್ಲರಿಗೂ ಸಹ ಹೆಮ್ಮೆಯ ವಿಷಯ. ಹೀಗೆ ಆಕೆಯ ಪ್ರತಿಭೆ ಪ್ರಪಂಚದಾದ್ಯಂತ ಪಸರಿಸಿ ಉತ್ತುಂಗಕ್ಕೆ ಏರಲಿ.

Related posts