Cinisuddi Fresh Cini News 

ಡಿ. 4ಕ್ಕೆ ತೆರೆಗೆ ಬರುತ್ತಿದೆ ಮೂಕಿ ಚಿತ್ರ ‘ಪುಷ್ಪಕ್’

ಬಹಳ ದಿನಗಳ ನಂತರ ಮೂಕಿ ಚಿತ್ರವೊಂದು ತೆರೆಗೆ ಬರುತ್ತಿದೆ. ಪುಷ್ಪಕ್ ಎಂಬ ಹೆಸರಿನ ಈ ಚಿತ್ರದಲ್ಲಿ ಮಾತಿನ ಸಹಾಯವೇ ಇಲ್ಲದೆ ಕಥೆ ಅರ್ಥವಾಗುವ ಹಾಗೆ ನಿರ್ದೇಶಕ ಓಂಪ್ರಕಾಶ್ನಾಯಕ್ ನಿರೂಪಣೆ ಮಾಡಿದ್ದಾರೆ,

ನಾಯಕ ಒಬ್ಬ ಫೋಟೋಗ್ರಾಫರ್, ಊರಿನಿಂದ ಬಂದಿದ್ದ ಶ್ರೀಮಂತ ಯುವತಿಯನ್ನು ಆತ ಮನದಲ್ಲೇ ಪ್ರೀತಿಸುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ.

ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ತೊಡಗುತ್ತಾನೆ. ನಂತರದಲ್ಲಿ ತನ್ನ ದಾರಿಗೆ ನಾಯಕ ಅಡ್ಡಿಯಾದಂತೆ ಭಾವಿಸಿ ನಾಯಕನನ್ನೇ ಕೊಲ್ಲಲು ಆತ ಸಂಚು ಹೂಡುತ್ತಾನೆ. ಚಿತ್ರದ ಕ್ಲೈಮ್ಯಾಕ್ಸ್ ಗಮನ ಸೆಳೆಯುತ್ತದೆ.

ಮಹದೇಶ್ವರ ಎಂಟರ್ಪ್ರೈಸಸ್ ಬ್ಯಾನರಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಕಥೆ, ಚಿತ್ರಕಥೆಯನ್ನು ಓಂಪ್ರಕಾಶ್ನಾಯಕ್ ಅವರೇ ರಚಿಸಿದ್ದಾರೆ ಚಿತ್ರವನ್ನು ನಿರ್ಮಿಸುವ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ವಿಶ್ವನಾಥ್ ಅವರ ಛಾಯಾಗ್ರಹಣ, ಶಂಕರ್ ಹಾಗೂ ರಾವಣ ಅವರ ಸಹನಿರ್ದೇಶನ, ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ಓಂಪ್ರಕಾಶ್ನಾಯಕ್ ಕೃತಿಕ, ಚಂದ್ರು, ಅವಿನಾಶ್ ಭರದ್ವಾಜï, ನಾಗೇಂದ್ರರಾವ್ ಆರ್.ಎಂ, ಸವಿತಾ ಮುಂತಾದವರಿದ್ದಾರೆ. ಡಿಸೆಂಬರ್ 4ರಂದು ಓಂ ಸಿನಿಮಾ ವಲ್ಡ್ ಓಟಿಟಿಯಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

Related posts