Bollywood Cinisuddi Fresh Cini News 

ಬಾಲಿವುಡ್ ನಲ್ಲಿ ಕಮಾಲ್ ಮಾಡಲು ಒಂದಾದ ಪುರಿ ಜಗನ್ನಾಥ್-ವಿಜಯ್ ದೇವರಕೊಂಡ

ತೆಲುಗು ಚಿತ್ರ ರಂಗದಿಂದ ಇಬ್ಬರು ಜನಪ್ರಿಯ ವ್ಯಕ್ತಿಗಳು ಹಿಂದಿ ಸಿನಿಮಾಕ್ಕೆ ಮೊದಲ ಬಾರಿಗೆ ಪ್ರಯಾಣ ಬೆಳಸಿ ದೊಡ್ಡ ಸದ್ದು ಮಾಡಲಿದ್ದಾರೆ!

ಮತ್ತೊಂದು ದೊಡ್ಡ ಹಿಂದಿ ಸಿನಿಮಾ ಎರಡು ಜನಪ್ರಿಯ ವ್ಯಕ್ತಿಗಳ ಸಂಗಮದೊಂದಿಗೆ ಆಗುತ್ತಿದೆ. ಅದೇ ತೆಲುಗು ಚಿತ್ರ ರಂಗದಲ್ಲಿ ಎರಡು ದಶಕಗಳ ಕಾಲ ಜನಪ್ರಿಯ ನಿರ್ದೇಶಕ ಅನ್ನಿಸಿಕೊಂಡಿರುವ ಪುರಿ ಜಗನ್ನಾಥ್ ಮತ್ತು ಈ ದಶಕದ ಅತ್ಯಂತ ಜನಪ್ರಿಯ ತೆಲುಗು ನಟ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಮುಹೂರ್ತ ಆಚರಿಸಿಕೊಂಡಿದೆ. ಮುಂಬೈ ಮಹಾ ನಗರದಲ್ಲಿ ಚಿತ್ರಕ್ಕೆ ಸರಳ ಪೂಜಾ ಸಹ ಇಂದು ನಡೆದಿದೆ.

ಪೂರ್ಣ ಪ್ರಮಾಣದಲ್ಲಿ ವಿಜಯ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಹಿಂದಿ ಭಾಷೆಯ ಚಿತ್ರಕ್ಕೆ ಪದಾರ್ಪಣೆ ಮಾಡುತ್ತಿರುವುದು. ಇವರ ಸಿನಿಮಗಳು ಹಿಂದಿಯಲ್ಲಿ ಡಬ್ ಆಗಿ ಮೂಡಿಬಂದಿದೆ. ಆದರೆ ಹಿಂದಿ ಭಾಷೆಯಲ್ಲೇ ತಯಾರಿಕೆ ಇದೆ ಮೊದಲು.

ವಿಜಯ ದೇವರಕೊಂಡ ಅಭಿನಯಿಸಿದ ಮೊದಲ ದೃಶ್ಯಕ್ಕೆ ಜನಪ್ರಿಯ ನಟಿ ಚಾರ್ಮಿ ಕೌರ್ ಕ್ಲಾಪ್ ಮಾಡಿದ್ದಾರೆ. ಪುರಿ ಜಗನ್ನಾಥ್ ಅವರ ಸೂಪರ್ ಹಿಟ್ ‘ಐ ಸ್ಮಾರ್ಟ್ ಶಂಕರ್’ ಸಿನಿಮಾ ನಂತರ ಇನ್ನೂ ಹೆಸರಿಡದ ಸಿನಿಮಾಕ್ಕೆ ಕರಣ್ ಜೋಹರ್ ಹಾಗೂ ಅಪೂರ್ವ ಮೆಹ್ತ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.

ಇದೊಂದು ಪ್ಯಾನ್ ಇಂಡಿಯ ಸಿನಿಮಾ. ಹಿಂದಿ ಭಾಷೆಯಲ್ಲಿ ತಯಾರಿಸಿ ಆಮೇಲೆ ದಕ್ಷಿಣ ಭಾರತದ ಎಲ್ಲ ಭಾಷೆಗಳಿಗೂ ಡಬ್ ಮಾಡಲಾಗುವುದು.

ಜನಪ್ರಿಯ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ನಾಯಕನನ್ನು ವಿಭಿನ್ನವಾಗಿ ತೋರಿಸುವುದು ತಿಳಿದಿರುವ ವಿಚಾರ. ಈ ಚಿತ್ರದಲ್ಲಿ ವಿಜಯ ದೇವರಕೊಂಡ ಅವರನ್ನು ವಿಶೇಷವಾಗಿ ತೆರೆಯ ಮೇಲೆ ಕಾಣಿಸಲಿದ್ದಾರೆ. ಇದರಲ್ಲಿ ವಿಜಯ ದೇವರಕೊಂಡ ಅವರ ಲುಕ್, ಗಾತ್ರ, ಪಾತ್ರದ ಬಗ್ಗೆ ವಿಶೇಷ ಆಗಿರಲಿದೆ.

ಇದೆ ಚಿತ್ರಕ್ಕೆ ವಿಜಯ ದೇವರಕೊಂಡ ಥೈಲ್ಯಾಂಡ್ ದೇಶಕ್ಕೆ ತೆರಳಿ ಮಾರ್ಷಿಯಲ್ ಕಲೆ ಸಹ ಕಲಿತು ಬರಲಿದ್ದಾರೆ. ಇದು ವಿಜಯ ದೇವರಕೊಂಡ ಅವರಿಗೆ ಸಹ ಬಹಳ ಛಾಲೆಂಜಿಂಗ್ ಆಗಿದೆ. ಈ ಹಿಂದೆ ಕಾಣದ ರೀತಿಯಲ್ಲಿ ವಿಜಯ್ ದೇವರಕೊಂಡ ಕಂಗೊಳಿಸಲಿದ್ದಾರೆ.

ಸಾಹಸ ಪ್ರದಾನ ಸಿನಿಮಾ ಧರ್ಮ ಪ್ರೊಡಕ್ಷನ್ ಅರ್ಪಿಸುವ ಪುರಿ ಜಗನ್ನಾಥ್ ಟೊರಿಂಗ್ ಟಾಕೀಸ್ ಹಾಗೂ ಪುರಿ ಕನೆಕ್ಟ್ ಅಡಿಯಲ್ಲಿ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಹಾಗೂ ಅಪೂರ್ವ ಮೆಹ್ತ. ಹೆಸರಾಂತ ನಟಿ ರಮ್ಯ ಕೃಷ್ಣ, ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಗೆಟಪ್ ಶ್ರೀನು ಹಾಗೂ ಇತರರು ತಾರಗಣದಲ್ಲಿದ್ದಾರೆ.

Share This With Your Friends

Related posts