Cinisuddi Fresh Cini News 

ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಡಬಲ್ ಗಿಫ್ಟ್ …!

ಸ್ಯಾಂಡಲ್ ವುಡ್ ನ ಪವರ್ ಫುಲ್ ಹೀರೋ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 45 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ , ಏಕೆಂದರೆ ಕರೋನಾ ವೈರಸ್ ನಿಂದ ಜನತೆ ಕಂಗಾಲಾಗಿದ್ದಾರೆ.

ಯಾವ ಅಭಿಮಾನಿಯೂ ಗುಂಪು ಗುಂಪಾಗಿ ಬಂದು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಾರದು, ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಋಣಿ ಎಂದು ಹೇಳುವ ಮೂಲಕ ಈಗಾಗಲೇ ಒಂದು ವಿಡಿಯೋ ಮೂಲಕ ಸಂದೇಶವನ್ನು ಕೂಡ ರವಾನಿಸಿದ್ದಾರೆ.

ಇದರ ಜೊತೆ ಜೊತೆಗೆ ಅಭಿಮಾನಿಗಳಿಗೆ ಡಬಲ್ ಖುಷಿಯನ್ನು ಕೂಡ ನೀಡಿದ್ದಾರೆ. ಯಾಕೆಂದರೆ ಪುನೀತ್ ಅಭಿನಯದ “ಯುವ ರತ್ನ” ಚಿತ್ರದ ಟೀಸರ್ ನ ಖಡಕ್ ಡೈಲಾಗ್ ಹೊರಬಂದಿದೆ. ಹಾಗೆಯೇ ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಕೂಡ ಪ್ರೇಕ್ಷಕರಿಗೆ ಮನಸ್ಸಿನ ಖುಷಿಯನ್ನು ಇಮ್ಮಡಿಗೊಳಿಸಿದೆ.

ಒಟ್ಟಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಡಬ್ಬಲ್ ಖುಷಿ ಅಭಿಮಾನಿಗಳಿಗೆ ಸಿಕ್ಕಿದ್ದು , ಎಲ್ಲೆಡೆ ಅಪ್ಪು ಫ್ಯಾನ್ಸ್ ಬರ್ತ್ಡೇಯನ್ನು ಅವರವರ ಸ್ಥಳದಲ್ಲೇ ಅದ್ಧೂರಿಯಾಗಿ ಆಚರಿಸಲಿದ್ದಾರoತೆ.

Share This With Your Friends

Related posts