Cinisuddi Fresh Cini News Tv / Serial 

ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಿಸುತ್ತಾರಂತೆ ಪವರ್ ಸ್ಟಾರ್

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರುಗಳು ಸಿನಿಮಾ ಜೊತೆ ಜೊತೆಗೆ ಧಾರಾವಾಹಿ ನಿರ್ಮಾಣ ಮಾಡೋದ್ದು ಸರ್ವೇಸಾಮಾನ್ಯ. ಈಗಾಗಲೇ ಅಣ್ಣಾವ್ರ ಕುಟುಂಬದಿಂದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕಿರುತೆರೆಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಪುನೀತ್‍ ರಾಜಕುಮಾರ್‍ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈಗಾಗಲೇ ಪವರ್ ಸ್ಟಾರ್ ಪುನೀತ್‍ ರಾಜಕುಮಾರ್‍ ನಟನೆಯ ಜೊತೆಗೆ ಕಿರುತೆರೆಯ ಹಲವಾರು ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದಾರೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಪುನೀತ್ ಕನ್ನಡಿಗರ ಮನಸ್ಸನ್ನು ಗೆದಿದ್ದಾರೆ. ಇದೀಗ ಮತ್ತೆ ಕಿರುತೆರೆಗೆ ಧಾರಾವಾಹಿ ನಿರ್ಮಾಣ ಮಾಡುವ ಮೂಲಕ ಎಂಟ್ರಿ ಕೊಡುತ್ತಿದ್ದಾರೆ.

ಈ ಧಾರಾವಾಹಿಗೆ “ನೇತ್ರಾವತಿ” ಎಂದು ಟೈಟಲ್‍ ಇಡಲಾಗಿದೆ ಯಂತೆ. ಇದೊಂದು ಭಕ್ತಿ ಪ್ರಧಾನ ಧಾರಾವಾಹಿ ವಾಗಿದ್ದು , ಶೀರ್ಷಿಕೆ ಹೇಳುವ ಪ್ರಕಾರ ಶ್ರೀ ಮಂಜುನಾಥನ ಸುತ್ತ ಹೆಣೆದಿರುವ ಕಥೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದು ಬoದಿದೆ. ಇನ್ನೂ ಈ ಧಾರಾವಾಹಿ ಯಾವಾಗ ಶುರುವಾಗುತ್ತೆ ಮತ್ತು ಪಾತ್ರಧಾರಿಗಳು ಯಾರ್ ಯಾರ್ ಅಭಿನಯಿಸುತ್ತಾರೆ ಎಂಬುದು ಸದ್ಯದಲ್ಲೇ ತಂಡ ತಿಳಿಸಲಿದೆ ಎಂಬ ಮಾಹಿತಿ ಬoದಿದೆ.

Related posts