Cinisuddi Fresh Cini News 

ಹಿರಿಯ ನಟಿ ಮಾಲಾಶ್ರೀ ಪತಿ, ನಿರ್ಮಾಪಕ ಕೋಟಿ ರಾಮು ವಿಧಿವಶ..!

ಕೊರೋನಾಗೆಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಅವರಿಗೆ ಕರೊನ ಸೊಂಕು ಇರೋದು ಪತ್ತೆಯಾಗಿತ್ತು, ಚಿಕಿತ್ಸೆಗಾಗಿ ಅವರು ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ತುಮಕೂರು ಜಿಲ್ಲೆ ಕುಣಿಗಲ್‌ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು, ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಅಂತ ಹೆಸರು ಪಡೆದುಕೊಂಡಿದ್ದರು.

ಕೋಟಿ ರಾಮು ಎಂದೇ ಖ್ಯಾತರಾದ ನಿರ್ಮಾಪಕ ರಾಮು ಅವರು ಕನ್ನಡದ ಹೆಮ್ಮೆಯ ನಿರ್ಮಾಪಕರಲ್ಲಿ ಒಬ್ಬರು. ಕುಣಿಗಲ್ ಮೂಲದ ರಾಮು, ಅದ್ಧೂರಿ ವೆಚ್ಚದಲ್ಲಿ ಸಾಹಸಮಯ ಸಿನಿಮಾ ನಿರ್ಮಾಣಕ್ಕೆ ಹೆಸರಾಗಿದ್ದಾರೆ.

ಚೈತ್ರದ ಪ್ರೇಮಾಂಜಲಿ ಚಿತ್ರದ ಹಂಚಿಕೆಯಿಂದ ಪ್ರವರ್ಧಮಾನಕ್ಕೆ ಬಂದ ರಾಮು, ಅಧಿಪತಿ ಚಿತ್ರದಿಂದ ನಿರ್ಮಾಪಕರಾದರು. ಅವರಿಗೆ ನಿರ್ಮಾಪಕನಾಗಿ ಒಂದು ಒಳ್ಳೆಯ ಬುನಾದಿ ಸಿಕ್ಕದ್ದು ಲಾಕಪ್ ಡೆತ್ ಚಿತ್ರದಿಂದ. ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಈ ಚಿತ್ರ ಮಾಡಿದ್ದರಲ್ಲಿ ನಿರ್ದೇಶಕ ಓಂಪ್ರಕಾಶರಾವ್ ಹಾಗೂ ರಾಮು ಅವರಿಗೆ ಸಮಾನ ಗೌರವ ನೀಡಬೇಕು.

ಥ್ರಿಲ್ಲರ್ ಮಂಜು ಎಂಬ ಪ್ರತಿಭಾವಂತ ಸಾಹಸ ನಿರ್ದೇಶಕನ ಎಲ್ಲ ಕನಸುಗಳನ್ನು ಸಾಕಾರಗೊಳಿಸುವ ಸಾಧ್ಯತೆಗಳನ್ನು ಈ ಚಿತ್ರ ತೆರೆದಿರಿಸಿತು. ದೊಡ್ಡ ಯಶಸ್ಸಿನ ಈ ಚಿತ್ರ ರಾಮು ಅವರಿಗೆ ಹುರುಪು ನೀಡಿತು. ಮುಂದೆ ಸಿಂಹದಮರಿ, ಭಾವ ಭಾಮೈದ, ಮಲ್ಲ, ಕಲಾಸಿಪಾಳ್ಯ, ರಜನಿ, ಚಾಮುಂಡಿ, ನಂಜುಂಡಿ, ದುರ್ಗಿ, ಸರ್ಕಲ್ ಇನ್ಸ್ ಪೆಕ್ಟರ್, ಲೇಡಿ ಪೋಲೀಸ್, ಲೇಡಿ ಕಮಿಷನರ್, ಕಿಚ್ಚ, ಕಿರಣ್ ಬೇಡಿ, ಲಾ ಅಂಡ್ ಆರ್ಡರ್, ಏ.ಕೆ.47, ರಾಕ್ಷಸ, ಶಿವಾಜಿನಗರ, ಮುತ್ತಿನಂಥ ಹೆಂಡತಿ ಹಲೋ ಸಿಸ್ಟರ್, ಗೂಳಿ, ಕಿಚ್ಚ, ಹಾಲಿವುಡ್ ಮುಂತಾದ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಪತ್ನಿ ಮಾಲಾಶ್ರೀ. ಇಬ್ಬರು ಮಕ್ಕಳಿದ್ದಾರೆ. 2014ರಲ್ಲಿ ಮುಂಬಯಿ, ಮಹಾಕಾಳಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

Related posts