Cinisuddi Fresh Cini News 

ಕೊರೋನಾ ಸೋಂಕಿತರ ನೆರವಿಗೆ ನಿಂತ ‘ಐರಾವನ್’ ಚಿತ್ರ ನಿರ್ಮಾಪಕ ಡಾ|| ನಿರಂತರ ಗಣೇಶ್

ರಾಜ್ಯಾದ್ಯಂತ ಕರೋನಾ ಹಾವಳಿ ಹೆಚ್ಚಳವಾಗಿದೆ. ಇದರ ನಡುವೆ ಹಲವಾರು ರೋಗಿಗಳು ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದ ನಿರ್ಮಾಪಕ ನಿರಂತರ ಗಣೇಶ್ ರವರು ಕರೋನಾ ಸೋಂಕಿತರ ನೆರವಿಗೆ ಬಂದಿದ್ದಾರೆ.

ಐರಾವನ್ ಚಿತ್ರದ ನಿರ್ಮಾಪಕರಾದ ಡಾ|| ನಿರಂತರ ಗಣೇಶ್, ಶ್ರೀ ತಿಪ್ಪೇಸ್ವಾಮಿ ಜೀ, ಸಕಾರ್ಯವ ಕರ್ನಾಟಕ, ಆಂಧ್ರ ತೆಲಂಗಾಣ ಇಂಚಾರ್ಜ್ ಆರ್ ಎಸ್ ಎಸ್, ಶ್ರೀ ಗಂಗಾಧರ್ ಜೀ ಅರೋಗ್ಯ ಭಾರತಿ ಇಂಚಾರ್ಜ್ ರವರು ಕೋವಿಡ್ ಸೋಂಕಿತರಿಗೆ ಉಚಿತ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು ರಾ ಮೂರ್ತಿ ನಗರ, ಯಲಹಂಕ, ಬನಶಂಕರಿ, ಚೆನ್ನೇನಹಳ್ಳಿ ಯಲ್ಲಿ 60 ಬೆಡ್ ಗಳ ವ್ಯವಸ್ಥೆ ಹಾಗೂ ಸೋಂಕಿತರಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ.

ಇದೆ ಸಂದರ್ಭದಲ್ಲಿ ಸಂಘದ ಸದಸ್ಯರು ಮಾತನಾಡಿ ಕೆಲಸಕ್ಕೆ ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ನೀಡಿದ್ದರು.ಇದೇ ರೀತಿ ನಮ್ಮ ಚಿತ್ರೋದ್ಯಮದ ಎಲ್ಲಾ ನಿರ್ಮಾಪಕರು ಕರೋನಾ ಸೋಂಕಿತರಿಗೆ ನೆರವಾಗಬೇಕೆಂದು ಹೇಳಿದರು.

Related posts