Cinisuddi Fresh Cini News 

ಸ್ಯಾಂಡಲ್ವುಡ್ ನ ಮತ್ತೊಬ್ಬ ನಿರ್ಮಾಪಕನನ್ನು ಬಲಿಪಡೆದ ಕೊರೋನಾ ..!

ಸ್ಯಾಂಡಲ್ವುಡ್ ನ ಖ್ಯಾತ ನಿರ್ಮಾಪಕ ಚಂದ್ರಶೇಖರ್ ವಿಧಿವಶರಾಗಿದ್ದಾರೆ. ನಿಮಿಶಾಂಬ ಪ್ರೊಡಕ್ಷನ್ಸ್ ನ ಮೂಲಕ ಅಣ್ಣಯ್ಯ , ಬಿಂದಾಸ್, ಏನೋ ಒಂಥರಾ , ರನ್ನ‌ ಚಿತ್ರದoತಹ ಯಶಸ್ವಿ ಚಿತ್ರವನ್ನು ನೀಡಿದ್ದ ನಿರ್ಮಾಪಕ ಚಂದ್ರಶೇಖರ್ ಇನ್ನಿಲ್ಲ.

23 ದಿನಗಳ ಹಿಂದೆ ಕೋವಿಡ್ ಪಾಸಿಟೀವ್ ಆಗಿದ್ದು , ಮಣಿಪಾಲ್ ಸೆಂಟರ್ ಗೆ ಅಡ್ಮಿಟ್ ಮಾಡಲಾಗಿತ್ತು. ನoತರ ಕೋವಿಡ್ ವಾಸಿಯಾಗಿತ್ತಾದ್ರೂ , ಇದ್ದಕ್ಕಿದ್ದಂತೆ ಶ್ವಾಸಕೋಶದ ಸಮಸ್ಯ ಉಲ್ಬಣಗೊಂಡು, ಇಂದು ಬೆಳಗಿನ ಜಾವದ ಸಮಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಚಂದ್ರಶೇಖರ್ ಅವ್ರು ಇತ್ತೀಚೆಗಷ್ಟೇ ನಟ ಉಪೇಂದ್ರ ರ ಸಿನಿಮಾವೊಂದನ್ನ ಅನೌನ್ಸ್ ಕೂಡ ಮಾಡಿದ್ರು. ಆದ್ರೆ ವಿಧಿಯಾಟ ಬೇರೆನೇ ಆಗಿದೆ. ಈಗಾಗಲೇ ಚಿತ್ರೋದ್ಯಮದ ಹಲವು ನಿರ್ಮಾಪಕರು , ನಿರ್ದೇಶಕರು , ಕಲಾವಿದರು , ತಂತ್ರಜ್ಞಾನರು ಹಾಗೂ ಕಾರ್ಮಿಕರು ಈ ಕರೋನಾ ಆಟ್ಟಹಾಸಕ್ಕೆ ಬಲಿಯಾಗಿದ್ದಾರೆ.

Related posts