Cinisuddi Fresh Cini News 

ಪ್ರಿಯಾಂಕಾ ಉಪೇಂದ್ರ “ಉಗ್ರಾವತಾರ” ದರ್ಶನ

ಮದುವೆ ಆದ ನಂತರ ಬಹುಕಾಲ ಸಿನಿಮಾರಂಗದಿಂದ ದೂರ ಉಳಿದಿದ್ದ ಪ್ರಿಯಾಂಕಾ ಈಗ ಸೋಲೋ ಹೀರೋಯಿನ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಉಗ್ರವತಾರದಲ್ಲಿ ಈಗ ಮತ್ತೊಮ್ಮೆ ಖಾಕಿ ಧಿರಿಸಿನಲ್ಲಿ ಧುರುಳರ ಮಟ್ಟ ಹಾಕಲು ಹೊರಟಿದ್ದಾರೆ.

ಸೆಕೆಂಡ್ ಹಾಫ್‍ನಲ್ಲಿ ಈಗಾಗಲೇ ಖಾಕಿ ಖದರ್ ಪ್ರದರ್ಶಿಸಿದ್ದ ಪ್ರಿಯಾಂಕಾ ಈಗ ನಿರ್ದೇಶಕ ಗುರುಮೂರ್ತಿ ಅವರು ನಿರ್ದೇಶಿಸುತ್ತಿರುವ ಉಗ್ರಾವತಾರ ದಲ್ಲಿ ಹಳ್ಳಿಯಿಂದ ಬಂದ ಹೆಣ್ಣೊಬ್ಬಳು ಹೇಗೆ ಪೊಲೀಸ್ ಅಧಿಕಾರಿಯಾಗಿ ದುಷ್ಟರನ್ನು ಸದೆಬಡಿಯುತ್ತಾಳೆ ಎಂಬುದನ್ನು ತೋರಿಸಲು ಹೊರಟಿದ್ದಾರೆ.

ಉಗ್ರಾವತಾರದಲ್ಲಿ ಅವರು ಯಾವ ದುಷ್ಟಕೂಟದ ಮೇಲೆ ಸಮರ ಸಾರುತ್ತಾಳೆ ಅದರಲ್ಲಿ ಆಕೆ ಹೇಗೆ ಸಕ್ಸಸ್ ಆಗುತ್ತಾರೆ, ಈ ಹಾದಿಯಲ್ಲಿ ಬರುವ ಚಾಲೆಂಜ್ ಅನ್ನು ಅವರು ಹೇಗೆ ಎದುರಿಸುತ್ತಾಳೆ ಎಂಬುದನ್ನು ನಿರ್ದೇಶಕರು ವಿಭಿನ್ನ ರೀತಿಯ ಕಥೆಯ ಮೂಲಕ ನಿರೂಪಿಸಿದ್ದಾರೆ.

ಉಗ್ರಾವತಾರ ಹೆಸರೇ ಹೇಳುವಂತೆ ಇದೊಂದು ಆ್ಯಕ್ಷನ್ ಬೇಸ್ಡ್ ಚಿತ್ರವಾಗಿದ್ದು ಇದರಲ್ಲಿ ಬರುವ ಮೈನವಿರೇಳಿಸುವ ಆ್ಯಕ್ಷನ್ ದೃಶ್ಯಗಳಲ್ಲಿ ಪ್ರಿಯಾಂಕಾ ಡೂಪ್ ಬಳಸದೆ ನೈಜವಾಗಿಯೇ ನಟಿಸಿದ್ದಾರೆ.

ಲಾಕ್‍ಡೌನ್‍ಗೂ ಮುಂಚೆಯೇ ಈ ಚಿತ್ರದ ಒಂದು ಫೈಟ್ ದೃಶ್ಯದಲ್ಲಿ ಪ್ರಿಯಾಂಕಾ ಜಬರ್‍ದಸ್ತ್ ಸಾಹಸ ಮೆರೆದಿದ್ದಾರೆ, ಇದಕ್ಕಾಗಿ ಒಂದು ವಾರ ಅವರು ಕಠಿಣ ಶ್ರಮ ಹಾಕಿದ್ದಾರಂತೆ. ಈಗಾಗಲೇ ಚಿತ್ರದ ಶೇ. 80ರಷ್ಟು ಚಿತ್ರೀಕರಣದ ಶೂಟಿಂಗ್ ಆಗಿದ್ದು ಇನ್ನುಳಿದ ಫೈಟಿಂಗ್ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಬೇಕಾಗಿದೆ.

ಉಗ್ರಾವತಾರ ಸಂಪೂರ್ಣ ಆ್ಯಕ್ಷನ್ ಬೇಸ್ಡ್ ಚಿತ್ರವಾಗಿರುವುದರಿಂದ ಇದಕ್ಕಾಗಿ ಸಾಕಷ್ಟು ತರಬೇತಿಯನ್ನು ಪ್ರಿಯಾಂಕಾ ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ಯೋಗಾಭ್ಯಾಸ ಮಾಡುತ್ತಿದ್ದ ಪ್ರಿಯಾಂಕಾ ಈ ಚಿತ್ರದ ಪಾತ್ರಕ್ಕಾಗಿ ಇನ್ನಷ್ಟು ಶ್ರಮ ಹಾಕಿದ್ದಾರೆ, ಲಾಕ್‍ಡೌನ್ ಸಮಯದಲ್ಲಿ ಬಾಲಿವುಡ್ ನಟ ಜೆಕೆ ಅವರು ಜಿಮ್ ಟ್ರೈನರ್ ಜೀತು ಅವರ ಪರಿಚಯ ಮಾಡಿಸಿದ್ದು ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕಾ, ಉಪ್ಪಿ ಮಕ್ಕಳು ದಿನ ವರ್ಕೌಟ್ ಮಾಡುತ್ತಿದ್ದಾರೆ.

ವರ್ಕೌಟ್ ಯಾರೂ ಬೇಕಾದರೂ ಮಾಡಬಹುದು ಆದರೆ ಸೂಕ್ತ ಮಾರ್ಗದರ್ಶನ ಮುಖ್ಯ. ದೇಹ ಕಸರತ್ತು ಮಾಡುವುದರಿಂದ ಮಸಲ್ಸ್ ಗಟ್ಟಿಯಾಗುವುದಲ್ಲದೆ ಕೊಬ್ಬಿನಾಂಶವು ಕರಗುತ್ತದೆ.

ಉಪ್ಪಿ 2 ಸಿನಿಮಾ ಚಿತ್ರೀಕರಣದ ವೇಳೆ ಕತ್ತಿನ ಬಳಿ ತೊಂದರೆ ಕಾಣಿಸಿಕೊಂಡಿದ್ದರಿಂದ ವರ್ಕೌಟ್ ಬಿಟ್ಟುಬಿಟ್ಟಿದ್ದೆ, ಆಗ ತೂಕ ಹೆಚ್ಚಿಸಿಕೊಂಡ ಪ್ರಿಯಾಂಕಾ 6 ವರ್ಷಗಳಿಂದೀಚೆಗೆ ಮತ್ತೆ ವರ್ಕೌಟ್ ಮಾಡುತ್ತಿದ್ದಾರೆ.

ದೇವಕಿ ಚಿತ್ರದಲ್ಲಿ ನಟಿಸಿದ ನಂತರ ಪ್ರಿಯಾಂಕಾ ಉಪೇಂದ್ರ ಬಣ್ಣದ ಲೋಕದಲ್ಲಿ ಬಹಳಷ್ಟು ಬ್ಯುಜಿಯಾಗಿದ್ದಾರೆ, ಮಮ್ಮಿ ಸೇವ್ ಮಿಯ ಸೀಕ್ವೆಲ್‍ಗೆ ರೆಡಿಯಾಗುತ್ತಿದ್ದರೆ, ಉಗ್ರಾವತಾರದಲ್ಲಿ ಖಾಕಿ ಪವರ್ ಪ್ರದರ್ಶಿಸಲು ಹೊರಟಿದ್ದಾರೆ,

ಇನ್ನು ಮಗ್‍ವೆನ್( ಮಗೇಶ್ ಹಾಗೂ ವೆಂಕಟ್) ಅವರು ನಿರ್ದೇಶಿಸುತ್ತಿರುವ ಸೇಂಟ್ ಮಾಕ್ರ್ಸ್ ರೋಡ್ ಎಂಬ ನೈಜ ಕಥಾವಸ್ತು ಹೊಂದಿರುವ
ಚಿತ್ರದಲ್ಲಿ ಡೆಲ್ಸಿ ಮತ್ತು ವೆರಾವಾಜ್ ಎಂಬ ಹೆಸರಿನ ದ್ವಿಪಾತ್ರದಲ್ಲಿ ನಟಿಸುತ್ತಿದ್ದರೆ, ಇನ್ನೂ ನಾಲ್ಕೈದು ಚಿತ್ರಗಳ ಕಥೆಯನ್ನು ಪ್ರಿಯಾಂಕಾ ಒಪ್ಪಿದ್ದಾರಂತೆ.

ಅಲ್ಲದೆ ತಮ್ಮದೇ ಆದ ಪ್ರೊಡಕ್ಷನ್ಸ್‍ನಡಿಯಲ್ಲಿ ಚಿತ್ರವೊಂದನ್ನು ನಿರ್ಮಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಈ ಚಿತ್ರದಲ್ಲಿ ಉಪ್ಪಿ ಜೊತೆಗೆ ಹೊಸಬರಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

Share This With Your Friends

Related posts