Cinisuddi Fresh Cini News 

ಯುವಪಡೆಗಳ ಜೊತೆ ಮೊಗ್ಗಿನ ಮನಸ್ಸು ನಿರ್ದೇಶನ ಶಶಾಂಕ್

“ಮೊಗ್ಗಿನ ಮನಸ್ಸು” ಚಿತ್ರದ ನಂತರ ನಿರ್ದೇಶಕ ಶಶಾಂಕ್, ಮತ್ತೊಮ್ಮೆ ಹೊಸ ಪ್ರತಿಭೆಗಳೊಂದಿಗೆ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. “ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಮುಖಾಂತರ, “ಪ್ರವೀಣ್” ಎಂಬ ಹೊಸ ನಾಯಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ವೈದ್ಯಕೀಯ ಪದವೀಧರರಾದ ಪ್ರವೀಣ್, ಹೊಸಪೇಟೆ ಮೂಲದವರಾಗಿದ್ದು, ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಪಡೆದು ಬೆಳ್ಳಿತೆರೆ ಏರಲು ಸಜ್ಜಾಗಿದ್ದಾರೆ.

ಇನ್ನೂ ಶೀರ್ಷಿಕೆ ನಿಗದಿಯಾಗದ, ಭಾವುಕ ಪ್ರೇಮಕಥೆಯ ಈ ಚಿತ್ರಕ್ಕೆ ಶಶಾಂಕ್ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ. ಲಾಕ್ಡೌನ್ ಗೂ ಮುನ್ನ ಸರಳವಾಗಿ ಮುಹೂರ್ತ ನೆರವೇರಿದ್ದು, ಲಾಕ್ಡೌನ್ ಮುಗಿದ ನಂತರ ಫೋಟೋಶೂಟ್ ಮಾಡಿ, ಶೀರ್ಷಿಕೆಯ ಜೊತೆ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಉಳಿದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

Related posts