Cinisuddi Fresh Cini News Tv / Serial 

ನನ್ನ ಕನಸಿನ ಚಿತ್ರ “ಬಾಂಡ್ ರವಿ”… ನಿರ್ದೇಶಕ ಪ್ರಜ್ವಲ್. ಎಸ್. ಪಿ

ಬಹಳಷ್ಟು ನಿರೀಕ್ಷಿಯೊಂದಿಗೆ ಬೆಳ್ಳಿ ಪರದೆ ಮೇಲೆ ಬರುತ್ತಿರುವ “ಬಾಂಡ್ ರವಿ” ಚಿತ್ರ ನೋಡುವುದಕ್ಕೆ ಹಲವು ಕಾರಣಗಳಿದೆಯಂತೆ. ಯುವ ನಿರ್ದೇಶಕ ಪ್ರಜ್ವಲ್ ಬಣ್ಣದ ಲೋಕದಲ್ಲಿ ತನ್ನದೇ ಒಂದು ಚಾಪನ್ನ ಮೂಡಿಸಲು ಹಲವು ಕನಸುಗಳನ್ನು ಕಟ್ಟಿಕೊಂಡು ಸುಮಾರು 14 ವರ್ಷಗಳ ಹಿಂದೆ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿ ಗೀತೆ ರಚನೆಕಾರ, ಸಹಾಯಕ, ಸಹ ನಿರ್ದೇಶಕರಾಗಿ ಸುಮಾರು 12ಕ್ಕೂ ಚಿತ್ರಗಳಲ್ಲಿ ಕೆಲಸ ಮಾಡಿ ಸಿನಿಮಾ ಬಗ್ಗೆ ಬಹಳಷ್ಟು ವಿಚಾರವನ್ನು ಅರಿತುಕೊಂಡು ಈಗ ಸ್ವತಂತ್ರವಾಗಿ ನಿರ್ದೇಶಕನಾಗಿ “ಬಾಂಡ್ ರವಿ” ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಲು ಸಿದ್ಧರಾಗಿದ್ದಾರೆ. ತನ್ನ ಕನಸನ್ನ ನನಸು ಮಾಡಿಕೊಳ್ಳುವುದರ ಜೊತೆಗೆ ತನ್ನ ಭವಿಷ್ಯದ ಮೊದಲ ಅಡಿಪಾಯವಾಗಲಿದೆ ಎನ್ನುವ ನಿರ್ದೇಶಕ ಪ್ರಜ್ವಲ್ ಈ ಚಿತ್ರದ ಸಾರಥ್ಯವನ್ನು ವಹಿಸಿದ ನಿರ್ಮಾಪಕ ನರಸಿಂಹಮೂರ್ತಿ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ರವರಿಗೆ ಕೃತಜ್ಞತೆ ಆಗಿರುತ್ತೇನೆ, ಹಾಗೆಯೇ ಪಿ ಆರ್ ಓ ಹರೀಶ್ ಅರಸ್ ಸಹಕಾರ ನೆನೆಯುತ್ತೇನೆ ಎನ್ನುತ್ತಾ ಚಿತ್ರದ ನಾಯಕನಾಗಿ ಅಭಿನಯಿಸಿರುವ ಪ್ರಮೋದ್ ನಾಯಕಿಯಾಗಿರುವ ಕಾಜಲ್ ಕುಂದರ್ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದರು. ಈ ಚಿತ್ರವು ಬಹಳಷ್ಟು ವಿಶೇಷತೆಗಳನ್ನು ಒಳಗೊಂಡಿದೆ ಎನ್ನುವ ನಿರ್ದೇಶಕರ ಮಾತಿನ ಪ್ರಕಾರ ಈ ಚಿತ್ರ ನೋಡಲು ಪ್ರಮುಖ ಕಾರಣಗಳು…

ವಾಸ್ತವತೆಯ ಕೈಗನ್ನಡಿ…
ಪ್ರೀತಿ ನಂಬಿದವರ ಬದುಕು…                                 ಮಾಸ್ ಹಾಗೂ ಕ್ಲಾಸ್ ಕಂಟೆಂಟ್…

ಲವ್, ಎಮೋಷನ್, ಥ್ರಿಲ್ಲರ್, ಆಕ್ಷನ್… ಹೀಗೆ ಬಹಳಷ್ಟು ಅಂಶಗಳನ್ನು ಒಳಗೊಂಡಿರುವ ಈ “ಬಾಂಡ್ ರವಿ” ಚಿತ್ರವು ಒಬ್ಬ ನಿರ್ದೇಶಕನ ಕಾರ್ಯವೈಕರಿ ಹಾಗೂ ಅವರ ಸಾಮರ್ಥ್ಯವನ್ನು ಚಿತ್ರದ ಮೂಲಕ ತೋರಿಸುವ ಅವಕಾಶ ಸಿಕ್ಕಿದೆಯಂತೆ. ಯುವ ನಿರ್ದೇಶಕ ಪ್ರಜ್ವಲ್ ಬಹಳಷ್ಟು ಪೂರ್ವ ತಯಾರು ಮಾಡಿಕೊಂಡು ಸಿದ್ಧಪಡಿಸಿರುವ ಈ “ಬಾಂಡ್ ರವಿ” ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಇದೆ 09 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ.

Related posts