Cinisuddi Fresh Cini News 

ಭದ್ರಾವತಿ ಕುಮಾರ್ ನಿರ್ಮಾಣದಲ್ಲಿ ಪ್ರಜ್ವಲ್ ಹೊಸ ಚಿತ್ರ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಆ್ಯಕ್ಟಿವ್ ಮತ್ತು ಲಕ್ಕಿ ಹೀರೋ. ಇತ್ತೀಚೆಗೆ ಅವರ ಹುಟ್ಟುಹಬ್ಬದಂದು ಮೂರ್ಕಲ್ ಎಸ್ಟೇಟ್ ಚಿತ್ರದ ನಿರ್ಮಾಪಕ ಭದ್ರಾವತಿ ಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಪ್ರಜ್ವಲ್ ದೇವರಾಜ್ ಜೊತೆ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.

ಡೈನಾಮಿಕ್ ಪ್ರಿನ್ಸ್ ಹುಟ್ಟುಹಬ್ಬದ ಕೊಡುಗೆಯಾಗಿ ಈ ಚಿತ್ರವನ್ನು ಆರಂಭಿಸಲು ಮುಂದಾಗಿದ್ದು , ಈ ಸದಭಿರುಚಿಯ ಚಿತ್ರ ನಿರ್ಮಾಪಕರಿಗೆ ಸಾಥ್ ನೀಡಿ ಉತ್ತಮ ಕಥೆಯನ್ನು ಸಿದ್ಧಪಡಿಸಿಕೊಂಡು ನಿರ್ದೇಶನ ಮಾಡಲು ಮುಂದಾಗಿದ್ದಾರೆ ಪಿ.ಸಿ. ಶೇಖರ್. ವಿಭಿನ್ನ ಚಿತ್ರಗಳನ್ನು ನೀಡಿ ಸೈ ಎನ್ನಿಸಿಕೊಂಡಿರುವ ಪಿ.ಸಿ. ಶೇಖರ್ ಈ ಚಿತ್ರದ ಮೂಲಕ ಹೊಸತನದ ಅಲೆಯನ್ನು ಎಬ್ಬಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಅರ್ಜುನ್ ಜನ್ಯ ಸಂಗೀತದ ಮೋಡಿ ಇರಲಿರುವ ಈ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಈ ಚಿತ್ರದ ಕೋ – ಡೈರೆಕ್ಟರ್ ಆಗಿ ನವೀನ್ ಕುಮಾರ್ ಡಿ.ಕೆ. ಕಾರ್ಯ ನಿರ್ವಹಿಸಲಿದ್ದು , ಇಡೀ ಯುವ ಪಡೆಗಳ ದಂಡೇ ಈ ಚಿತ್ರವನ್ನು ಸಿದ್ದ ಪಡೆಸಲು ಮುಂದಾಗಿದೆ. ಕೊರೋನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಚಿತ್ರತಂಡ ಚಿತ್ರೀಕರಣದ ವಿವರವನ್ನು ಹಂಚಿಕೊಳ್ಳಲಿದೆಯಂತೆ.

ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ , ಇನ್ಸ್ಪೆಕ್ಟರ್ ವಿಕ್ರಂ ಚಿತ್ರಗಳು ಬಿಡುಗಡೆಗೆ ಸಿದ್ಧವಿದ್ದರೆ. ವೀರಂ ಸೇರಿದಂತೆ ಇನ್ನೂ ಕೆಲವು ಚಿತ್ರಗಳು ಚಿತ್ರೀಕರಣದಲ್ಲಿ ನಿರತವಾಗಿದೆ. ಸದ್ಯ ಸ್ಯಾಂಡಲ್ ವುಡ್ ನ ಲಕ್ಕಿ ಹೀರೋ ಆಗಿರುವ ಪ್ರಜ್ವಲ್ ದೇವರಾಜ್ ನೂತನ ಚಿತ್ರವನ್ನು ನಿರ್ಮಾಪಕ ಭದ್ರಾವತಿ ಕುಮಾರ್ ಅದ್ಧೂರಿಯಾಗಿ ನಿರ್ಮಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Share This With Your Friends

Related posts