Cinisuddi Fresh Cini News 

‘ಪ್ರಚಂಡ ಪುಟಾಣಿಗಳು’ ಚಿತ್ರಕ್ಕೆ ಚಾಲನೆ

ಶ್ರೀಮತಿ ಡಿ ಸುನಿತ ಹಾಗು ಎನ್ ರಘ ರವರ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಚಂಡ ಪುಟಾಣಿಗಳು ಚಲನಚಿತ್ರಕ್ಕೆ ಇದೇ ಸೋಮುವಾರ ಚಿಕ್ಕಬಳ್ಳಾಪುರ ಜಿಲ್ಲೆ ಚಿತಾಮಣಿ ತಾಲ್ಲೂಕಿನ ಬಂಡಕೋಟ ಗ್ರಾಮದ ಶ್ರೀ ಸತ್ಯಮ್ಮದೇವಿ ದೇವಾಲಯದಲ್ಲಿ ಮುಹೂರ್ಥ ನೆರವೇರಿತು.

ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀ ಸುನಂದಮ್ಮ ವೆಂಕಟೇಶ್ ರವರು ಚಿತ್ರಕ್ಕೆ ಮೊದಲ ಕ್ಲಾಪ್ ನೀಡಿ ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದರು. ಸಮಾಜ ಸೇವಕರಾದ ಶ್ರೀ ಸಿದ್ದೇಪಲ್ಲಿ ಸುಬ್ಬಾರೆಡ್ಡಿಯವರು ಮೊದಲ ದೃಷ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದರು.

ಉದ್ಯಮಿ ಶ್ರೀಕಾಂತ್ ಸಮಾಜಸೇವಕರಾದ ವೆಂಕಟೇಶಪ್ಪರವರು ಚಿತ್ರತಂಡಕ್ಕೆ ಶುಭಹಾರೈಸಿದರು. ಮಾಸ್ಟರ್ ದೃವ,ಮಾಸ್ಟರ್ ಶ್ರೀಹರ್ಷ. ಮಾಸ್ಟರ್ ಕ್ರಿತನ್.ಬೇಬಿ ಅಂಕಿತ ಬೇಬಿ ಸುಪ್ರಿತಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದಲ್ಲಿ ಹಿರಿಯ ನಟರಾದ ಅವಿನಾಶ್ ರವರು ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು ತಾರಾಗಣದಲ್ಲಿ ಕೋಲಾರ್ ಬಾಲು,ಡ್ಯಾನಿಡಾ ಕೃಷ್ಣಮೂರ್ತಿ,ನಿಡುವಳ್ಳಿ ರೇವಣ್ಣ,ತಾರೇಹಳ್ಳಿ ಹನುಮಂತಪ್ಪ,ಮದನ್ ಮಂಜು,ಶ್ರೀಕಾಂತ್ ಸಂದೀಪ್ ಬುಲೆಟ್ ರಘ,ಮೊದಲಾದವರು ನಟಿಸುತ್ತಿದ್ದಾರೆ.

ರಾಜೀವ್ ಕೃಷ್ಣ ಕಥೆ -ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ,ವಿನಯ್ ಆಲೂರು ಸಂಕಲನ..ಕೋಲಾರ್ ಸುಮಂತ್ ಸ್ಥಿರಚಿತ್ರಣ,ಸುರೇಶ್ ಕಂಬಳಿ ಸಾಹಿತ್ಯ ,ವಿನುಮನಸು ಸಂಗೀತ,ಸುನಿಲ್ ಕುಮಾರ್ ನಿರ್ವಹಣೆ ಚಿತ್ರತಂಡಕ್ಕಿದೆ.ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಸಿದ್ದತೆ ಮಾಡಿಕೊಂಡಿರುವ ಚಿತ್ರತಂಡ ಕೋಲಾರ ಚಿಕ್ಕಬಳ್ಳಾಪುರ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಸುತ್ತಿದ್ದಾರೆ.

Share This With Your Friends

Related posts