Cinisuddi Fresh Cini News 

ಪ್ರಚಂಡ ಪುಟಾಣಿಗಳಿಗೆ ಕಾಳಿ ಸ್ವಾಮೀಜಿ ಗಾನ ಬಜಾನ

ಇತ್ತೀಚೆಗಷ್ಟೇ ಮುಹೂರ್ತ ಕಂಡಿದ್ದ ರಾಜೀವ್ ಕೃಷ್ಣ ನಿರ್ದೇಶನದ “ಪ್ರಚಂಡ ಪುಟಾಣಿಗಳು” ಚಿತ್ರದ ಮೊದಲ‌ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

ನಿರ್ದೇಶಕರೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ “ಪ್ರಚಂಡ ಪುಟಾಣಿಗಳು” ಚಿತ್ರವನ್ನು ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ವಿ ಸುನಿತ ಹಾಗು ಎನ್ ರಘ ರವರ ಸಹಕಾರದಲ್ಲಿ ನಿರ್ಮಾಣವಾಗುತ್ತಿದೆ.

ಇತ್ತೀಚೆಗೆ ರಾಜಾಜಿನಗರದ ವಿನುಮನಸು ಸ್ಟುಡಿಯೋದಲ್ಲಿ‌ ಹಾಡುಗಳ ಧ್ವನಿ ಮುದ್ರಣ ಕಾರ್ಯ ನೆರವೇರಿತು.

“ಎಂತಾ ಚೆಂದವು ನೋಡು ಎಂತಾ ಅಂದವು ನೋಡು”,
“ಯಾರೋ-ಯಾರೋ-ಯಾರೋ ಹೆತ್ತೋರು ನಿಮ್ಮನ್ನ”,
“ವಂದನೆ-ವಂದನೆ ಗಣಪತಿಯೇ ನಿನಗೆ ವಂದನೆ “,
ಎಂಬ ಸಾಲುಗಳುಳ್ಳ ಮೂರು ಹಾಡುಗಳಿದ್ದು
ಮೂರು ಹಾಡುಗಳಿಗೆ ಸುರೇಶ್ ಕಂಬಳಿ ಸಾಹಿತ್ಯಬರೆದಿದ್ದಾರೆ.

ವಿನುಮನಸು ಸಂಗೀತ ಸಾರಥ್ಯದಲ್ಲಿ “ಯಾರೋ ಯಾರೋ ಯಾರೋ ಹೆತ್ತೋರು ನಿಮ್ಮನ್ನ” ಹಾಡನ್ನು ಕಾಳಿಮಠ ಸ್ವಾಮೀಜಿಗಳಾಗ ಶ್ರೀ ರಿಷಿಕುಮಾರ ಗುರೂಜಿ ಹಾಡಿರುವುದು ವಿಷೇಷ.

ಈ ಹಿಂದೆ ಸ್ವಾಮೀಜಿ ಅವರು ,ಕೆಲವು ಭಕ್ತಿಗೀತೆಗಳಿಗಷ್ಟೇ ಧ್ವನಿಗೂಡಿಸಿದ್ದ ರಿಷಿ ಕುಮಾರ ಸ್ವಾಮಿಗಳು ಇದೇ ಮೊದಲ ಬಾರಿಗೆ ಚಲನ ಚಿತ್ರಗೀತೆಯನ್ನು ಅಧ್ಬುತವಾಗಿ ಹಾಡಿದ್ದಾರೆ.

ಅವಿನಾಶ್ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಈ ಚಿತ್ರದಲ್ಲಿ ಮಾಸ್ಟರ್ ಕೃತಿನ್,ಮಾಸ್ಟರ್ ಶ್ರೀಹರ್ಷ ಮಾಸ್ಟರ್ ಧೃುವ,ಬೇಬಿ ಅಂಕಿತ ಬೇಬಿ ಸುಪ್ರಿಯ  ಕೋಲಾರಬಾಲು,ಡ್ಯಾನಿಡಾ ಕೃಷ್ಣಮೂರ್ತಿ,ಮದನ್ ಮಂಜು, ಶ್ರೀಕಾಂತ್, ಸಂದೀಪ್, ರೇವಣ್ಣ, ಹನುಮಂತಪ್ಪ, ರಾಮ್ ಜನಾರ್ಧನ್,  ಮೊದಲಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಛಾಯಾಗ್ರಹಣ,ವಿನಯ್ ಸಂಕಲನ,

ಕೋಲಾರ್ ಸುಮಂತ್ ಸ್ಥಿರಚಿತ್ರಣ,ಸುನಿಲ್ ಕುಮಾರ್ ನಿರ್ವಹಣೆ ಇದ್ಎ. ಶೀಘ್ರದಲ್ಲಿಯೇ ಎರಡನೇ ಹಂತದ ಚಿತ್ರೀಕರಣವನ್ನು ಕೈವಾರ,ನಂದಿ ಗಿರಿದಾಮ ಕೋಲಾರದ ಅಂತರಗಂಗೆ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ತಯಾರಾಗುತ್ತಿದೆ ಎಂದು ನಿರ್ದೇಶಕ ರಾಜೀವ್ ಕೃಷ್ಣ ತಿಳಿಸಿದ್ದಾರೆ.

Related posts