Cinisuddi Fresh Cini News 

ಪಡ್ಡೆಹುಲಿಗೆ ‘ಪವರ್’ ವಾಯ್ಸ್..!

ಕೊನೆಗೂ ಪಡ್ಡೆಹುಲಿ ಚಿತ್ರದಲ್ಲಿ ನಟಿಸುತ್ತಿರುವ ಸೀಕ್ರೆಟ್ ಸೂಪರ್ ಸ್ಟಾರ್ ಯಾರೆಂದು ಅನಾವರಣಗೊಂಡಿದೆ. ಹೌದು ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಯಂಗ್ ಟೈಗರ್ ಶ್ರೇಯಸ್ ರವರ ಜೊತೆ ” ಪಡ್ಡೆಹುಲಿ ” ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನೊಳಗೊಂಡ ಪಡ್ಡೆಹುಲಿ ಚಿತ್ರದ 2ನೇ ಟ್ರೇಲರ್ ನಾಳೆ ಸಂಜೆ 6ಕ್ಕೆ ಪಿ.ಆರ್.ಕೆ. ಆಡಿಯೋ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

ತೇಜಸ್ವಿನಿ ಎಂಟರ್ಪ್ರೈಸಸ್ ಮೂಲಕ ಎಂ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಅದ್ದೂರಿಯಾಗಿ ಸಿದ್ಧಗೊಳ್ಳುತ್ತಿರುವ ರಾಜಾ ಹುಲಿ ಖ್ಯಾತಿಯ ಗುರು ದೇಶಪಾಂಡೆ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ .ಎಸ್. ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

ಯುವ ನಟ ಶ್ರೇಯಸ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮುಖ್ಯಭೂಮಿಕೆಯಲ್ಲಿದ್ದು , ಚಿತ್ರ ಮುಂದಿನ ವಾರ ತೆರೆ ಮೇಲೆ ಬಿಡುಗಡೆಯಾಗಲಿದೆ.ನಲ್ಲಿ ಅಕ್ಕಿ-ಕೆಕೆ ಒಟ್ಟಿಗೆ ನಟಿಸಿದ್ದರು.

Share This With Your Friends

Related posts