`ಭೈರಾದೇವಿ’ಗೆ ಹಣ ಹಾಕಿದ ರಾಧಿಕ ಕುಮಾರಸ್ವಾಮಿ

ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ರಾಧಿಕ ಕುಮಾರಸ್ವಾಮಿ ಅವರು ನಿರ್ಮಿಸುತ್ತಿರುವ `ಭೈರಾದೇವಿ` ಚಿತ್ರದ ಮುಹೂರ್ತ ಸಮಾರಂಭ ಫೆಬ್ರವರಿ 12ರಂದು ಗವಿಪುರಂನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು.  ಈ ಹಿಂದೆ ಆರ್ ಎಕ್ಸ್ ಸೂರಿ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀಜೈ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರಮೇಶ್ ಆರವಿಂದ್, ರಾಧಿಕ ಕುಮಾರಸ್ವಾಮಿ, ಅನು ಪ್ರಭಾಕರ್, ಸ್ಕಂದ ಅಶೋಕ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಮೇಶ್ ಅರವಿಂದ್, ರಾಧಿಕ ಕುಮಾರಸ್ವಾಮಿ ಹಾಗೂ ಸ್ಕಂದ ಅಶೋಕ್ ಅವರು ಅಭಿನಯಿಸಿದ ಚಿತ್ರದ ಮೊದಲ ಸನ್ನಿವೇಶಕ್ಕೆ ಶಮಿಕ ಕುಮಾರಸ್ವಾಮಿ ಆರಂಭಫಲಕ ತೋರಿದರು.

ನಿರ್ದೇಶಕ ಶ್ರೀಜೈ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಸಹ ಮಾಡಿದ್ದಾರೆ. ಸೂರಜ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಹೆಚ್.ಸಿ.ವೇಣುಗೋಪಾಲ್ ಛಾಯಾಗ್ರಹಣ, ರವಿಚಂದ್ರನ್ ಸಿ ಸಂಕಲನ, ರವಿ ನಾಯರ್ ಕಲಾ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಹಾಗೂ ಮಾಸ್‍ಮಾದ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಮೋಹನ್ ಹಾಗೂ ಶಶಿಧರ್ ಅವರ ನಿರ್ಮಾಣ ನಿರ್ವಹಣೆಯಿದೆ.

ಹರಿದ್ವಾರ, ಬೆಂಗಳೂರು, ಊಟಿ, ಸಕಲೇಶಪುರ, ವಾರಣಾಸಿ(ಕಾಶಿ), ಮೈಸೂರು ಮುಂತಾದ ಕಡೆ ಚಿತ್ರಕ್ಕೆ 80ದಿನಗಳ ಚಿತ್ರೀಕರಣ ನಡೆಯಲಿದೆ. ಈ ಚಿತ್ರ ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ.