'ವಜ್ರಮುಖಿ'ಯಲ್ಲಿ ದೆವ್ವವಾಗಿ ಕಾಡಲಿದ್ದಾರಂತೆ ನೀತು ..!

ನೀತು ಇದೇ ಮೊದಲ ಬಾರಿಗೆ ದೆವ್ವದ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ‘ಸಿಗಂದೂರು ಚೌಡೇಶ್ವರಿ’ ಚಿತ್ರ ನಿರ್ವಿುಸಿದ್ದ ಶಶಿ ಸಾಗರ್ ಅವರ ನಿರ್ವಣ-ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ವಜ್ರಮುಖಿ’ ಚಿತ್ರಕ್ಕೂ ನೀತು ನಾಯಕಿ. 

ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ ಬರೆದು ನಿರ್ಮಾಣ ಶಶಿಕುಮಾರ್, ಇವರ ‘ವಜ್ರಮುಖಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಇವರು ಈ ಹಿಂದೆ ಸಿಗಂದೂರು ಚೌಡೇಶ್ವರಿ ಮಹಾತ್ಮೆ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಸಂಕಲನ-ನಿರ್ದೇಶನ-ಆದಿತ್ಯ ಕುಣಿಗಲ್, ಛಾಯಾಗ್ರಹಣ - ಪಿ.ಕೆ.ಹೆಚ್. ದಾಸ್ ಸಂಗೀತ- ರಾಜ್‍ಭಾಸ್ಕರ್, ಸಾಹಿತ್ಯ-ವಿ.ನಾಗೇಂದ್ರಪ್ರಸಾದ್, ಸಂಭಾಷಣೆ-ವಿನಾಯಕರಾಮ್ ಕಲೆಗಾರ್-ಕಿಂಗ್ ಕಿಶೋರ್, ಸಾಹಸ-ಕೌರವ ವೆಂಕಟೇಶ್, ನೃತ್ಯ-ಅರವಿಂದ್, ನಿರ್ವಹಣ್-ದಾಡಿ ರಮೇಶ್, ಮೂರು ಹಾಡುಗಳಿರುವ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ನಿಂದ ಕೂಡಿದೆ, ಸಾಗರದ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ - ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್, ಸ್ವಪ್ನಶ್ರೀ, ಕು||ಪ್ರೇಕ್ಷಾ ಮುಂತಾದವರಿದ್ದಾರೆ.