ಕಾಂಚನ ರೀಮೇಕ್‍ನಲ್ಲಿ ಅಕ್ಷಯ್‍ಕುಮಾರ್

ಬಾಲಿವುಡ್ ಆ್ಯಕ್ಷನ್‍ಕಿಂಗ್ ಅಕ್ಷಯ್ ಕುಮಾರ್‍ಗೂ
ಕಾಲಿವುಡ್‍ಗೂ(ತಮಿಳು ಸಿನಿಮಾರಂಗ) ಒಂದು ರೀತಿಯ ನಂಟಿದೆ.
ತಮಿಳಿನಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳು ಹಿಂದಿಯಲ್ಲಿ ರೀಮೇಕ್ ಆದರೆ ಅಲ್ಲಿ ಅಕ್ಕಿಗೆ ಆದ್ಯತೆ.  ಅಕ್ಷಯ್ ಕುಮಾರ್ ಈ ಹಿಂದೆ ತಮಿಳಿನ ಸೂಪರ್ ಹಿಟ್ ಚಿತ್ರಗಳ ಹಿಂದಿ ರಿಮೇಕ್ ನಲ್ಲಿ ಅಭಿನಯಿಸಿದ್ದರು.

ಪಮ್ಮಲ್ ಕೆ ಸಂಭಾತಮ್ (ಕಂಬಕ್ತ್ ಇಷ್ಕ್), ತುಪಾಕಿ(ಹಾಲಿಡೇ) ಮತ್ತು ಸಿರುಥೈ(ರೌಡಿ ರಾಥೋರ್). ತಮಿಳಿನ ನಟ ರಾಘವ
ಲಾರೆನ್ಸ್ ಅಭಿನಯದ ಸೂಪರ್ ಹಿಟ್ ಕಾಂಚನ ಚಿತ್ರದ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್‍ಅಭಿನಯಿಸಲಿ
ದ್ದಾರೆ.

ಕಾಂಚನ ಚಿತ್ರದ ರಿಮೇಕ್ ನಲ್ಲಿ ಅಭಿನಯಿಸಲು ಅಕ್ಷಯ್ ಕುಮಾರ್ ಒಲವು ತೋರಿದ್ದಾರೆ. ನಿರ್ದೇಶಕ ಲಾರೆನ್ಸ್ ಹಿಂದಿ ಪ್ರೇಕ್ಷಕರಿಗಾಗಿ ಸ್ಕ್ರಿಪ್ಟ್ ಕಾರ್ಯದಲ್ಲಿ ತೊಡಗಿದ್ದಾರೆ.ಉಳಿದ ಪಾತ್ರವರ್ಗದ ಬಗ್ಗೆ ಇನ್ನು ನಿಕ್ಕಿಯಾಗಿಲ್ಲ.