ಬಾಲಿವುಡ್ ನಲ್ಲಿ ಜೋರಾಗಿದೆ ಕಾರ್ ಗಿಫ್ಟ್ ಟ್ರೆಂಡ್

ಇತ್ತೀಚಿಗೆ ಬಾಲಿವುಡ್ ನಲ್ಲಿ ತಮ್ಮ ಪ್ರೀತಿಪಾತ್ರರಿಗೆ ವಿಶೇಷ ದಿನದಂದು ಕಾರ್ ಗಳನ್ನೂ ಗಿಫ್ಟ್ ಮಾಡುವ ಟ್ರೆಂಡ್ ಹೆಚ್ಚಾಗಿದೆ.
ಪತ್ನಿ ಐಶ್ವರ್ಯ ಹಾಗೂ ಮಗಳು ಆರಾಧ್ಯಾಗೆ ನೆನಪಿನಲ್ಲುಳಿಯುವ ಏನಾದರೂ ಒಂದು ಉಡುಗೊರೆ ನೀಡಲೇಬೇಕು ಎಂದು ಅಭಿಷೇಕ್ ಬಚ್ಚನ್ ತಮ್ಮ ಮಗಳ ಮೊದಲನೆ ಹುಟ್ಟುಹಬ್ಬಕ್ಕೆ ಅದನ್ನು ಪೂರೈಸಲು ಮುಂದಾದರು. ಬಿಎಂಡಬ್ಲು ಮಿನಿ ಕೂಪರ್‍ಅನ್ನು ಖರೀದಿಸಿದರು.

ಇಷ್ಟೇ ಅಲ್ಲ ಆರಾಧ್ಯಾ ಹುಟ್ಟಿದ ನಾಲ್ಕು ತಿಂಗಳಿಗೆ ಆಡಿ-8ಕಾರನ್ನು ಕೂಡ ಪತ್ನಿಗೆ ಉಡು ಗೊರೆಯಾಗಿ ನೀಡಿದ್ದರು. ನಟಿ ಶ್ರೀದೇವಿ ಅವರಿಗೆ ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ  ಇಷ್ಟವಂತೆ. ಬಾಕ್ಸ್ ಆಫೀಸ್‍ನಲ್ಲಿ ಆ ಸಿನಿಮಾ ಸಾಕಷ್ಟು ಸುದ್ದಿ ಕೂಡ ಮಾಡಿತು. ಈ ಯಶಸ್ಸನ್ನು ತನ್ನ ಪತಿಯೊಂದಿಗೂ ಹಂಚಿಕೊಳ್ಳಬೇಕು ಎಂದೇ ಶ್ರೀದೇವಿ ಪತಿ ಬೋನಿ ಕಪೂರ್‍ಗೆ ಒಂದು ಉಡುಗೊರೆಯನ್ನು ನೀಡಿದ್ದರು. ಅದು ಪಾರ್ಶ್ ಕಾರನ್ನು.ಪ್ರೀತಿ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ.

ನಿರ್ಮಾಪಕ ಆದಿತ್ಯಾ ಚೋಪ್ರಾ ರಾಣಿ ಮುಖರ್ಜಿಗೆಂದೇ ಪ್ರೇಮದ ಕಾಣಿಕೆಯಾಗಿ ನೀಡಿದ್ದರು ಒಂದು ಕೋಟಿ ರೂಪಾಯಿಯ ಆಡಿ ಎ8 ಡಬ್ಲು 12 ಕಾರು. ಪ್ರೀತಿಯ ಸುಂದರ ಕ್ಷಣ ಮತ್ತಷ್ಟು ಸುಂದರವಾಗಬೇಕೆಂದರೆ ಅಂಥದ್ದೇ ಒಂದು ಉಡುಗೊರೆಯೂ ಇರಬೇಕು. ಅದಕ್ಕೆಂದೇ ನಟ ಅಜಯ್ ದೇವಗನ್ ತನ್ನ ಪತ್ನಿ ಕಾಜೋಲ್‍ಗೆ ದುಬಾರಿ ಉಡುಗೊರೆಯನ್ನೇ ಕೊಟ್ಟರು. ತಮ್ಮ ಮೊದಲ ಮಗು ನ್ಯಾಸ್ ಹುಟ್ಟಿದ ಸ್ಮರಣಾರ್ಥ ಆಡಿ ಸೆಡಾನ್ ಅನ್ನು, ಜೊತೆಗೆ ಕಾಜೋಲ್ ಹುಟ್ಟಿದ ಹಬ್ಬಕ್ಕೂ ಆಡಿ ಕ್ಯೂ 7 ಕಾರನ್ನು ನೀಡಿದ್ದರು.