ಸೂಪರ್ ಸ್ಟಾರ್ ರಜನಿಯ 'ಕಾಲಾ' ಚಿತ್ರದ ರಿಲೀಸ್ ಡೇಟ್ ಫಿಕ್ಸ್


ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕಾಲಾ ಚಿತ್ರದಡೇಟ್ ಫಿಕ್ಸ್ ಆಗಿದ್ದು, ಏಪ್ರಿಲ್ 27 ರಂದು ಬಿಡುಗಡೆ ಆಗಲಿದೆ. ಚಿತ್ರ ವೀಕ್ಷಣೆಗೆ ಕಾತುರತೆಯಿಂದ ಕಾಯುತ್ತಿದ್ದ ರಜನಿ ಅಭಿಮಾನಿಗಳಿಗೆ ಚಿತ್ರತಂಡ ಈ ಸಿಹಿ ಸುದ್ದಿ ನೀಡಿದೆ.
ನಟ ಧನುಷ್ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಕಾಲಾ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

' ಕಾಲಾ' ರಜನಿಕಾಂತ್ ಮುಂಬೈ ಧಾರವಿ ಪ್ರದೇಶದಲ್ಲಿ ತಮಿಳಿಗರ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಈ ಚಿತ್ರವು ದರೋಡೆಕೋರ ಹಾಜಿ ಮಸ್ತಾನ್ ಜೀವನವನ್ನು ಆಧರಿಸಿದೆ ಎಂದು ಊಹಿಸಲಾಗಿತ್ತು. ಆದರೆ ನಿರ್ಮಾಪಕರು ಆಧಾರವಿಲ್ಲದ ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಈ ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಖುರೇಶಿ, ಸಮೃತಿಕಾಣಿ ಮತ್ತು ಅಂಜಲಿ ಪಾಟೀಲ್ ನಟಿಸಿದ್ದಾರೆ. ನಾನಾ ಪಾಟೇಕರ್ , ರಾಜಕಾರಣಿಯಾಗಿದ್ದಾರೆ ಮತ್ತು ಈಶ್ವರ ರಾವ್ ರಜನಿಕಾಂತ್ ಅವರ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಾರೆ. ತ್ತು ಅಂಜಲಿ ಪಾಟೀಲ್ ನಟಿಸಿದ್ದಾರೆ. ನಾನಾ ಪಾಟೇಕರ್ , ರಾಜಕಾರಣಿಯಾಗಿದ್ದಾರೆ ಮತ್ತು ಈಶ್ವರ ರಾವ್ ರಜನಿಕಾಂತ್ ಅವರ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಾರೆ.