ಇದು ಯಾವ ಸ್ಟಾರ್ ನಟನ ಬಾಲ್ಯದ ಫೋಟೋ ಪತ್ತೆಹಚ್ಚಬಲ್ಲಿರಾ..?

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಆಕ್ಟಿವ್ ಆಗಿರುವ ಸ್ಟಾರ್ ಒಬ್ಬರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನಿಮ್ಮಿಂದಾದರೆ ಈ ಸ್ಟಾರ್ ನಟ, ಕನ್ನಡ ಕಂಡ ಅಪ್ರತಿಮ ಕಲಾವಿದ ಯಾರೆಂದು ಗುರುತು ಹಿಡಿಯಲು ಪ್ರಯತ್ನ ಮಾಡಿ. ಈ ನಟನ ಬಗ್ಗೆ ನಿಮಗೆ ಚನ್ನಾಗಿಯೇ ಗೊತ್ತಿದೆ ಏಕೆಂದರೆ ಇವರು ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಈ ಖ್ಯಾತ ನಟ ಯಾರೆಂದು ನಿಮಗೆ ಇನ್ನು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ ಪರವಾಗಿಲ್ಲ ನಾವೇ ಹೇಳಿಬಿಡುತ್ತೇವೆ. ಈ ಫೋಟೋದಲ್ಲಿರುವ 9 ವರ್ಷದ ಆ ಪುಟ್ಟ ಬಾಲಕ ನಮ್ಮ ನೆಚ್ಚಿನ ನಾಯಕ ಜಗ್ಗೇಶ್. ಈ ಫೋಟೋವನ್ನು ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದು "1972 ರಲ್ಲಿ..ನಾನು 9ವರ್ಷದವ, ಬಂಧುಗಳು ಕಳಿಸಿದ ಚಿತ್ರ..ಅಮರ ಹಳೆ ನೆನಪು.." ಎಂದು ಬರೆದುಕೊಂಡಿದ್ದಾರೆ.