'ಸೂಪರ್-30' ಸಿನಿಮಾದಲ್ಲಿ ಹೃತಿಕ್ ಗೆ ಜೋಡಿಯಾದ ಮೃಣಾಲ್ ಠಾಕೂರ್

'ಸೂಪರ್-30' ಸಿನಿಮಾದಲ್ಲಿ ಹೃತಿಕ್ ಗೆ ಜೋಡಿಯಾದ
ಭಾರತದ ಖ್ಯಾತ ಗಣಿತ ಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಜೀವನ ಮತ್ತು ಸಾಧನೆ ಕುರಿತ ಸೂಪರ್-30 ಸಿನಿಮಾ ತೆರೆ ಕಾಣುವುದಕ್ಕೆ ಮುನ್ನವೇ ಬಹು ನಿರೀಕ್ಷೆ ಹುಟ್ಟಿಸಿದೆ. ಮ್ಯಾಥ್ಸ್ ಗುರು ಪಾತ್ರದಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾನೆ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಗ್ರೀಕ್ ಗಾಡ್‍ನಂತೆ ಸದಾ ಕಂಗೊಳಿಸುತ್ತಿದ್ದ ಸಿಕ್ಸ್ ಪ್ಯಾಕ್ ಹೃತಿಕ್ ಗಣಿತಗುರುವಿನ ಪಾತ್ರಕ್ಕಾಗಿ ಗುರುತಿಸಲಾಗದಷ್ಟು ಬದಲಾಗಿದ್ದಾನೆ.

ಈ ಚಿತ್ರದಲ್ಲಿ ನಾಯಕನಿಗೆ ಯಾರು ಜೋಡಿಯಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಸಹ ಇತ್ತು. ಈಗ ಲೀಡಿಂಗ್ ಲೇಡಿಯಾಗಿ ಖ್ಯಾತ ಟಿವಿ ತಾರೆ ಮೃಣಾಲ್ ಠಾಕೂರ್ ಆಯ್ಕೆಯಾಗಿದ್ದಾಳೆ.  ಗಂಗಾ ನದಿದಂಡೆ ಮೇಲೆ ಒಂದು ಪೂಜಾ ಸನ್ನಿವೇಶದ ಚಿತ್ರೀಕರಣ ಮೂಲಕ ಸೂಪರ್-30 ಸೆಟ್ಟೇರಿದ್ದು, ನಂತರ ರಾಮನಗರ ಕೋಟೆಯಲ್ಲಿ ಹೃತಿಕ್ ಮತ್ತು ಮೃಣಾಲ್ ಶೂಟಿಂಗ್‍ನಲ್ಲಿ ಪಾಲ್ಗೊಂಡು. ಕೋಟೆಯ ಒಂದು ಭಾಗವನ್ನು ಕೋಚಿಂಗ್ ಇನ್ಸ್‍ಟಿಟ್ಯೂಟ್ ಆಗಿ ಪರಿವರ್ತಿಸಲಾಗಿತ್ತು.

ಕುಂಕುಮ್ ಭಾಗ್ಯ ಧಾರವಾಹಿಯಲ್ಲಿ ಬುಲ್‍ಬುಲ್
ಪಾತ್ರದಲ್ಲಿ ಮನೆಮಾತಾಗಿದ್ದ ಮೃಣಾಲ್ ಕೆಲವು
ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದರೂ, ಸೂಪರ್-30ಯಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿದ್ದಾಳೆ.
ವಿಕಾಸ್ ಬಾಲ್ ನಿರ್ದೇಶನದ ಈ ಸಿನಿಮಾ ಮುಂದಿನ ವರ್ಷ ಗಣರಾಜ್ಯೋತ್ಸವದ ವೇಳೆಗೆ ತೆರೆ ಕಾಣಲಿದೆ.